Wednesday, January 22, 2025
ಸುದ್ದಿ

430 ಮಿಲಿಯನ್ ವರ್ಷದ ಹಿಂದಿನ ಸಮುದ್ರ ಜೀವಿಯ ಪಳಯುಳಿಕೆ ಪತ್ತೆ – ಕಹಳೆ ನ್ಯೂಸ್

ಭೂಮಿ ರಚನೆಯಾಗಿ ಸಾವಿರಾರು ವರ್ಷಗಳೇ ಕಳೆದ್ರು, ಈ ಭೂಮಿ ಒಂದಲ್ಲ ಒಂದು ವಿಚಾರ ಪ್ರತಿನಿತ್ಯ ಹೊರಹಾಕುತ್ತಲೇ ಇದೆ, ಅಲ್ಲದೆ ಅನೇಕ ವರ್ಷಗಳ ಹಿಂದೆ ನಡೆದ ವಿಚಾರಗಳು ಇಂದಿಗೂ ಜೀವಂತಾವಾಗಿರುವಂತೆ ಮಾಡಿದೆ, ಮಾನವನ ಉಗಮಕ್ಕೂ ಮೊದಲು ಹಾಗೂ ನಂತರದ ಭೂಮಿಯ ಮೇಲೆ ಅದೆಷ್ಟೋ ಜೀವಿಗಳು ಬದುಕಿ, ನಶಿಸಿ ಹೋಗಿವೆ. ಈ ರೀತಿಯ ಜೀವಿಗಳಿಗೆ ಹೊಸ ಸೇರ್ಪಡೆಯಾಗಿದೆ.

ಹೌದು, ಸುಮಾರು 430 ಮಿಲಿಯನ್ ವರ್ಷದ ಹಿಂದೆ ಜೀವಿಸುತ್ತಿದ್ದ ಸಮುದ್ರ ಜೀವಿಯೊಂದರ ಪಳಯುಳಿಕೆಯನ್ನು ಅಮೆರಿಕಾ-ಇಂಗ್ಲೆಂಡ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ಇದಕ್ಕೆ ಸೊಲ್ಲಾಸೀನಾ ಸಿತುಳು ಎಂದು ಹೆಸರಿಡಲಾಗಿದೆ. ಸುಮಾರು 430 ಮಿಲಿಯನ್ ವರ್ಷಗಳಿಂದ ಪಳಿಯುಳಿಕೆ ಉಳಿದಿರುವ ಬಗ್ಗೆ ವೇಳೆ ವಿಜ್ಞಾನಿಗಳೇ ಅಚ್ಚರಿಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಿಟನ್ ನ ಹಿರ್‍ಫೋರ್ಡ್‍ಶೈರ್ ಎಂಬ ಜ್ವಾಲಾಮುಖಿಯ ಬೂದಿಯಲ್ಲಿ ಈ ಪಳೆಯುಳಿಕೆ ಸಿಕ್ಕಿದೆ. ಸುಮಾರು ಮೂರು ಸೆಂಟಿಮೀಟರ್ ಉದ್ದವಿರುವ ಈ ಪ್ರಾಣಿಯ, ಮುಳ್ಳಿನ ಆಕಾರದ ಕೈಗಳು ಭಾರಿ ದೊಡ್ಡ ಪ್ರಮಾಣದಲ್ಲಿರುವುದರಿಂದ ದೊಡ್ಡ ಆಕಾರದಲ್ಲಿ ಕಾಣಿಸುತ್ತಿದೆ. ಇದನ್ನು ಸೀ ಪಿಗ್ ಹಾಗೂ ಸೀ ಕುಕುಂಬರ್ ಪ್ರಬೇಧದ ಜೀವಿ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು