Thursday, January 23, 2025
ಸುದ್ದಿ

ವಿವಾಹಿತ ವ್ಯಕ್ತಿ ಪ್ರಿಯತಮೆಯೊಂದಿಗೆ ಆತ್ಮಹತ್ಯೆ : ಕಹಳೆ ನ್ಯೂಸ್

ಬೆಳ್ತಂಗಡಿ : ವಿವಾಹಿತ ವ್ಯಕ್ತಿಯೋರ್ವ ಪ್ರಿಯತಮೆಯೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ನಗರದಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತರನ್ನು ಕಿರಣ್ ಶೆಟ್ಟಿ ಹಾಗೂ ಸಂಗೀತಾ ಎಂದು ಗುರುತಿಸಲಾಗಿದೆ. ಕಿರಣ್ ಶೆಟ್ಟಿ ಪತ್ನಿಯೊಂದಿಗೆ ಜಗಳವಾಡಿದ್ದರೆನ್ನಲಾಗಿದೆ. ಬಳಿಕ ಅವರು ಸಂಗೀತಾರೊಂದಿಗೆ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳ್ತಂಗಡಿ ನಿವಾಸಿಯಾಗಿದ್ದ ಕಿರಣ್ ಶೆಟ್ಟಿ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ತಿಂಗಳ ಹಿಂದೆಯಷ್ಟೇ ಇವರು ವಿವಾಹವಾಗಿದ್ದರು. ಲಾಯಿಲಾ ನಿವಾಸಿಯಾಗಿದ್ದ ಸಂಗೀತಾ ಅವಿವಾಹಿತೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು