Thursday, January 23, 2025
ಸುದ್ದಿ

“ಶೂನ್ಯಂ” ಸುದ್ದಿ ಸಮಾಚಾರ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳು ಲೇಖನಗಳನ್ನು ಬರೆಯಬೇಕು ಮತ್ತು ಅವುಗಳಲ್ಲಿ ಪರಿಣತಿಯನ್ನು ಹೊಂದಬೇಕು. ಅಂತಹ ಲೇಖನಗಳು ಸಂಶೋಧನತ್ಮಕವಾಗಿರಬೇಕು. ಇಂತಹ ಲೇಖನಗಳು ನಮ್ಮ ಸಮಾಜದ ಮೇಲೆ ಹೆಚ್ಚು ಪ್ರಭಾವವನ್ನು ಬಿರುತ್ತದೆ. ಇದೇ ಹಾದಿಯಲ್ಲಿ ಇಂದು ಗಣಿತ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಶೂನ್ಯಂ ಎಂಬ ಬುಲೆಟಿಂಗ್‍ನ್ನು ಬಿಡುಗಡೆ ಮಾಡುವ ಮೂಲಕ ವಿಭಾಗದ ಅನೇಕ ಕಾರ್ಯಕ್ರಮಗಳನ್ನು ಬಿತ್ತರಿಸಲು ಮತ್ತು ನಮ್ಮ ವ್ಯವಸ್ಥೆ, ಕಲಿಕೆಯ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗವು ಆಯೋಜಿಸಿದ್ದ ‘ಶೂನ್ಯಂ’ ಸುದ್ದಿ ಸಮಾಚಾರ ಬಿಡುಗಡೆಗೊಳಿಸಿ ಸೋಮವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಣಿತಶಾಸ್ತ್ರವನ್ನು ಆರಂಭಿಸಿದ ದೇಶ, ಶೂನ್ಯವನ್ನು ಕಂಡುಹಿಡಿದ್ದದು ಭಾರತ. ಈ ಮೂಲಕ ಇಡೀ ಜಗತ್ತಿಗೆ ಶೂನ್ಯವನ್ನು ಪರಿಚಯಿಸಿದ ಹೆಮ್ಮ ನಮ್ಮದು. ವಿಭಾಗದ ಬುಲೆಟಿಂಗ್ ಕೂಡ ಶೂನ್ಯಂ ಎಂಬ ಹೆಸರನ್ನು ಇಟ್ಟಿರುವುದು ತುಂಬಾ ಸಂತೋಷದ ವಿಷಯವಾಗಿದೆ. ವಿದ್ಯಾರ್ಥಿಗಳು ಪ್ರತಿಭೆಗಳನ್ನು ಹಾಗೂ ಬರಹಗಳನ್ನು ಬಂಧನ ಮಾಡಿಕೊಳ್ಳಬಾರದು. ಅವುಗಳಿಗೆ ಸ್ವಾತಂತ್ರ್ಯವಾದ ಅವಕಾಶವನ್ನು ನೀಡಬೇಕು. ಇತಂಹ ಕಾರ್ಯದಲ್ಲಿ ಗಣಿತಶಾಸ್ತ್ರ ವಿಭಾಗ ಮಾಡುತ್ತಿದೆ ಎಂಬುದು ನಮ್ಮ ಹೆಮ್ಮೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೂನ್ಯವನ್ನು ಪ್ರತಿಯೊಂದು ಕಡೆಯು ಉಪಯೋಗಿಸುತ್ತಾರೆ. ಒಬ್ಬ ವ್ಯಕ್ತಿಯ ಜೀವನ ಪ್ರಾರಂಭವಾಗುವುದು ಶೂನ್ಯದಿಂದ. ವಿದ್ಯಾರ್ಥಿಗಳಿಗೆ ಕಾಲೇಜಿನ ಈ ಬುಲೆಟಿನ್ ವೇದಿಕೆಯಾಗಿದೆ. ನಮ್ಮ ಮತ್ತು ವಿಭಾಗದ ಬೆಳವಣಿಗೆಗೆ ಒಂದು ಉತ್ತಮ ಸಾಧನ. ಇದರ ಉಪಯೋಗವನ್ನು ನಮ್ಮ ವಿದ್ಯಾರ್ಥಿಗಳು ಪಡೆದುಕೊಳ್ಳುವುದು ಆವಶ್ಯಕ ಎಂದರು.

ಕಾರ್ಯಕ್ರದಲ್ಲಿ ಉಪನ್ಯಾಸಕ ವಿಭಾಗದ ನಿತೀಶ್ ಕುಮಾರ್, ಇತರ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದರು. ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಮಾನಸ ಎಂ. ಸ್ವಾಗತಿಸಿ, ವಿಭಾಗ ಸಂಯೋಜಕಿ ವಿದ್ಯಾಸರಸ್ವತಿ ವಂದಿಸಿದರು. ವಿದ್ಯಾರ್ಥಿ ನಮೃತ ಕಾರ್ಯಕ್ರಮ ನಿರೂಪಿಸಿದರು.