Friday, January 24, 2025
ಸುದ್ದಿ

ಕಡಬದ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ರಜಾ ಬೇಸಿಗೆ ಶಿಬಿರ – ಕಹಳೆ ನ್ಯೂಸ್

ಕಡಬ: ಕಡಬ ಗ್ರಾಮದ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ರಜಾ ಬೇಸಿಗೆ ಶಿಬಿರದಲ್ಲಿ ಪನೋಳಿಬೈಲು ಹಾಡಿಗೆ ಮಕ್ಕಳ ಚಲನಚಿತ್ರ ನಿರ್ಮಾಣದ ಉದ್ಘಾಟನೆಯು ಶಾಲಾ ವಠಾರದಲ್ಲಿ ಎ.14ರಂದು ನಡೆಯಿತು. ಉದ್ಘಾಟನೆಯನ್ನು ಶ್ರೀ ಮಹಾವಿಷ್ಣು ಭಜನಾ ಮಂಡಳಿಯ ಅಧ್ಯಕ್ಷರಾದ ಸುಂದರ ಗೌಡ ನೆರವೇರಿಸಿ ಶಾಲಾ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಶಿಕ್ಷಕರ ಪರಿಶ್ರಮ ಕ್ಕೆ ನಾವು ಎಲ್ಲರೂ ಮೆಚ್ಚುಂತಹದ್ದು ಎಂದು ಹೇಳಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕುಮಾರದಾರ ಯುವಕ ಮಂಡಳದ ಸ್ಥಾಪಕ ಅಧ್ಯಕ್ಷರಾದ ಸುಂದರ ಗೌಡ ಪಾಳೋಳಿ ,ಪಿಜಕ್ಕಳ ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಕಸುಮಾವತಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಕಲಾವಿದ ಯೋಗೀಶ್, ಶಾಲಾಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ವೀಡಿಯೋ ಚಿತ್ರೀಕರಣದಲ್ಲಿ ಕಡಬ ಶ್ರೀ ದೇವಿ ಪೇಪರ್ ಸ್ಟಾಲ್‍ನ ಮಾಲಕರಾದ ಬಾಲಕೃಷ್ಣ ರೈ ಪುತ್ರ ಮಂತನ್ ರೈ ಮತ್ತು ಪ್ರಶಾಂತ್ ಕುಮಾರ್ ಸಹಕರಿಸಿದರು. ಶಾಲಾ ಮುಖ್ಯಶಿಕ್ಷಕಿ ಚೇತನಾ ಸ್ವಾಗತಿಸಿದರು, ಸಹಶಿಕ್ಷಕ ವಸಂತ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು