Friday, January 24, 2025
ಸುದ್ದಿ

ಭಾರತೀಯ ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ – ಕಹಳೆ ನ್ಯೂಸ್

ಬರಗಾಲವೆಂದು ತತ್ತರಿಸುತ್ತಿದ್ದ ಜನತೆಗೆ ಹವಮಾನ ಇಲಾಖೆ ಸಿಹಿ ಸುದ್ದಿಯನ್ನ ನೀಡಿದೆ. ಹದಿನೈದು ದಿನಗಳ ಹಿಂದೆ ಖಾಸಗಿ ಹವಾಮಾನ ಸಂಸ್ಥೆಯೊಂದು ಈ ಬಾರಿ ಮುಂಗಾರು ದುರ್ಬಲವಾಗಿರುವುದರಿಂದ ಮಳೆ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿತ್ತು. ಅಲ್ಲದೆ ಮುಂಗಾರು ಪ್ರವೇಶವೂ ತಡವಾಗಲಿದೆ ಎಂಬ ಮಾಹಿತಿ ನೀಡಿತ್ತು.

ಆದರೆ ಇದೀಗ ಭಾರತೀಯ ಹವಾಮಾನ ಇಲಾಖೆ ನೀಡಿರುವ ವರದಿ ರೈತ ಸಮುದಾಯದಲ್ಲಿ ಹರ್ಷ ಮೂಡಿಸಿದೆ. ಎಲ್ ನಿನೊ ಪರಿಣಾಮ ಕ್ಷೀಣವಾಗುವ ಸಾಧ್ಯತೆ ಇರುವುದರಿಂದ ಮುಂಗಾರು ಮೇ ಅಂತ್ಯಕ್ಕೆ ಭಾರತ ಪ್ರವೇಶಿಸಲಿದೆ ಎಂದು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ ಈ ಬಾರಿಯ ಮುಂಗಾರು ಮಳೆ ವಾಡಿಕೆ ಪ್ರಮಾಣದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ವಾರ್ಷಿಕವಾಗಿ ಸುರಿಯುವ ಒಟ್ಟಾರೆ ಮಳೆ ಪ್ರಮಾಣದ ಶೇಕಡಾ 70 ರಷ್ಟು ಪ್ರಮಾಣ ಮುಂಗಾರಿನಲ್ಲಿ ಸುರಿಯಲಿದೆ ಎಂದು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು