ಖಾದಿ ಉತ್ಪನ್ನಗಳನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ಬಳಿಕ ಖಾದಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದು, 2018-19 ನೇ ಸಾಲಿನಲ್ಲಿ ಶೇಕಡಾ 28 ರಷ್ಟು ಮಾರಾಟ ಹೆಚ್ಚಳವಾಗಿದೆ ಎಂದು ಕೆವಿಐಸಿ ತಿಳಿಸಿದೆ.
2014-15 ರಲ್ಲಿ 1,311 ಕೋಟಿ ರೂಪಾಯಿಗಳಷ್ಟಿದ್ದ ಖಾದಿ ಉತ್ಪನ್ನಗಳ ವಹಿವಾಟು 2018-19 ರ ವೇಳೆಗೆ 3,215 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಅಲ್ಲದೆ 2019-20ರಲ್ಲಿ 5 ಸಾವಿರ ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆಯಿದೆ.
ರೆಡಿಮೇಡ್ ಖಾದಿ ಉತ್ಪನ್ನಗಳ ಪೈಕಿ ನಮೋ ಜಾಕೆಟ್‍ಗಳಿಗೆ ಅತಿ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಕಳೆದ ಎರಡು ತಿಂಗಳ ಅವಧಿಯಲ್ಲಿ ನಮೋ ಆಪ್ ಮೂಲಕವೇ 7000 ಜಾಕೆಟ್‍ಗಳು ಮಾರಾಟವಾಗಿವೆ ಎನ್ನಲಾಗಿದೆ. ಇದರ ಜೊತೆಗೆ ಖಾದಿ ನಿಗಮದ ಮಳಿಗೆಗಳಲ್ಲಿ ದಿನಕ್ಕೆ ಕನಿಷ್ಠ 200 ಮೋದಿ ಜಾಕೆಟ್ ಗಳನ್ನು ಮಾರಾಟಮಾಡಲಾಗುತ್ತಿದೆ.