ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಮೇ ತಿಂಗಳಲ್ಲಿ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಗಳ ರ‍್ಯಾಂಕ್ ಮತ್ತು ನಗದು ಪುರಸ್ಕಾರಗಳ ಪಟ್ಟಿ ಪ್ರಕಟಗೊಳಿಸಿದ್ದು, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಅಕ್ಷತಾ ಕೆ ಎನ್ ಇವರು ನಗದು ಪುರಸ್ಕಾರಗಳಾದ ನೊಬೆಲ್ ವಿಜ್ಞಾನಿ ಸಿ ವಿ ರಾಮನ್ ಪುರಸ್ಕಾರ, ಡಾ| ಎಸ್ ಎನ್ ಬೋಸ್ ಪುರಸ್ಕಾರ, ಡಾ| ಹೋಮಿಬಾಬ ಪುರಸ್ಕಾರ ಮತ್ತು ಎನ್‍ಎಸ್‍ಆರ್‍ಪಿ-7 ಪುರಸ್ಕಾರಗಳಿಗೆ ಆಯ್ಕೆಯಾಗಿದ್ದಾರೆ. ಈ ಪುರಸ್ಕಾರಗಳು ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಎಲೆಕ್ಟ್ರಾನಿಕ್ಸ್ ಐಚ್ಛಿಕ ವಿಷಯದಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರಿಗೆ ಲಭಿಸುವುದಾಗಿದ್ದು, ಅಕ್ಷತಾ ಕೆ ಎನ್ 2500 ರಲ್ಲಿ 1783 ಅಂಕಗಳನ್ನು ಗಳಿಸಿರುತ್ತಾರೆ.
ಸತತ ಮೂರು ವರ್ಷಗಳಿಂದ ವಿಭಾಗದ ವಿದ್ಯಾಥಿಗಳು ಈ ಪುರಸ್ಕಾರಗಳಿಗೆ ಭಾಜನರಾಗುತ್ತಿರುವುದು ವಿಶೇಷವಾಗಿದೆ. ಈ ಮಹತ್ ಸಾಧನೆಗೈದ ಇವರು ಕಡಬದ ಕೋಡಿ ಎಂಬಲ್ಲಿಯ ನಿವಾಸಿ ಭವಾನಿ ಮತ್ತು ನೋಣಪ್ಪ ಗೌಡ ಇವರ ಪುತ್ರಿಯಗಿರುತ್ತಾರೆ. ಈ ವಿಶೇಷ ಸಾಧನೆಗೆ ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ, ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ, ಸ್ನಾತಕೋತ್ತರ ಆದ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ಮತ್ತು ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ| ಇ ದೀಪಕ್ ಡಿ’ಸಿಲ್ವ ಅಭಿನಂದನೆ ಸಲ್ಲಿಸಿರುತ್ತಾರೆ.