Recent Posts

Monday, January 27, 2025
ಸುದ್ದಿ

ಮಿಟೂ ಬಳಿಕ ಮದುವೆಯ ಫೋಟೋಗಳನ್ನು ರಿವಿಲ್ ಮಾಡಿದ ಸಂಗೀತಾ ಭಟ್ – ಕಹಳೆ ನ್ಯೂಸ್

ಬೆಂಗಳೂರು: ಕಳೆದ ವರ್ಷದ ಸಿನಿಮಾರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮಿಟೂ ಆಂಧೋಲನದಲ್ಲಿ ತಮಗೂ ಆ ಅನುಭವಗಳಾಗಿವೆ ಎಂದಿದ್ದ ನಟಿ ಸಂಗೀತಾ ಭಟ್. ನಂತರ ಸಿನಿಮಾರಂಗ ತೊರೆದಿದ್ದರು. ಆದರೆ, ಇತ್ತಿಚೆಗಷ್ಟೇ ಅವರು ಜರ್ಮನಿಯಲ್ಲಿ ಕಾಣಿಸಿಕೊಂಡು, ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಹೌದು, ಮಿಟೂ ಆಂಧೋಲನದ ಬಳಿಕ ಸಂಗೀತಾ ಭಟ್ ಬಹಳ ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ಪತಿಯೊಂದಿಗೆ ಜರ್ಮನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಮದುವೆ ಫೋಟೋದೊಂದಿಗೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲ ಬಾರಿಗೆ ತಮ್ಮ ಮದುವೆ ಫೋಟೋವನ್ನು ರಿವೀಲ್ ಮಾಡಿದ್ದಾರೆ. ತಮ್ಮ ಫೇಸ್ಬುಕ್ ಖಾತೆಯಲ್ಲಿ ಟೂಗೆದರಮೆಸ್ ಎಂದು ಮದುವೆಯ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಇವರ ಪತಿ ಸುದರ್ಶನ್ ಸ್ಟಾಂಡ್ ಅಪ್ ಕಾಮಿಡಿಯನ್. ಟಿವಿ, ಶೋಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟು ಫೇಮಸ್ ಆಗಿದ್ದಾರೆ. ಇತ್ತಿಚೆಗೆ ಈ ದಂಪತಿಗಳು ತಮ್ಮ ವೆಡ್ಡಿಂಗ್ ಆಯನಿವರ್ಸರಿಯನ್ನು ಜರ್ಮನಿಯಲ್ಲಿ ಆಚರಿಸಿಕೊಂಡಿದ್ದಾರೆ. ಕಳೆದ ವರ್ಷ ಮಿಟೂ ಅಭಿಮಾನದಲ್ಲಿ ಪಾಲ್ಗೊಂಡ ಸಂಗೀತಾ ಭಟ್ ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ತದನಂತರ ಅವರ ನಟನೆಯ ‘ಕಿಸ್ಮತ್’ ಹಾಗೂ ‘ಅನುಕ್ತ’ ರಿಲೀಸ್ ಆಯಿತು. ಈ ಚಿತ್ರದಲ್ಲಿನ ಅವರ ಅಭಿನಯ ಕಂಡು, ಪ್ರೇಕ್ಷಕರು ಸಹ ‘ಕಹಿ ಮರೆತು ಚಿತ್ರದಲ್ಲಿ ನಟಿಸಿ’ ಎಂದರು. ಇದೀಗ ತಮ್ಮ ಪತಿ ಮತ್ತು ಅವರ ಕುಟುಂಬದೊಂದಿಗೆ ಪ್ರವಾಸದಲ್ಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಗೀತಾ ಬರೆದುಕೊಂಡಿದ್ದಾರೆ. ಅಲ್ಲಿನ ಫೋಟೋಗಳನ್ನು ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ‘ಇಲ್ಲಿ ಯಾವ ಕಲಬೆರಿಕೆಯೂ ಇಲ್ಲದೇ, ಇಲ್ಲಿ ವಾತಾವರಣ ಪ್ರಶಾಂತವಾಗಿದೆ’ ಎಂದು ಅವರು ಹೇಳಿದ್ದಾರೆ.