ಅನೈತಿಕ ಸಂಬಂಧ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಸುದೆಮುಗೇರು ಎಂಬಲ್ಲಿ ಘಟನೆ ನಡೆದಿದೆ.
ಕಿರಣ್ ಮತ್ತು ಸಂಗೀತಾ ಅನೈತಿಕ ಸಂಬಂಧ ಹೊಂದಿದ್ದು ಕಿರಣ್ ಪತ್ನಿ ಇವರಿಬ್ಬರು ಜೊತೆಗೆ ಇರುವುದನ್ನು ನೋಡಿದ್ದಾಳೆ. ಪರಿಣಾಮ ಕೋಪಿಸಿಕೊಂಡು ಮನೆಯಿಂದ ಹೋಗಿದ್ದಾಳೆ. ಈ ವಿಚಾರ ಬಹಿರಂಗವಾದ ಹಿನ್ನಲೆಯಲ್ಲಿ ಕಿರಣ್ ಮತ್ತು ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೆ ಹಗ್ಗದಲ್ಲೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.