2019ರ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವೇಕಾನಂದ ಪದವಿಪೂರ್ವ ಮತ್ತು ನರೇಂದ್ರ ಪದವಿ ಪೂರ್ವ ಸಂಸ್ಥೆಗಳು ಶೇ 93.5 ಫಲಿತಾಂಶವನ್ನು ಪಡೆದಿದೆ.
ವಿಜ್ಞಾನ ವಿಭಾಗದಲ್ಲಿ 592 ಅಂಕಗಳನ್ನು ಗಳಿಸುವುದರ ಮೂಲಕ ಜಾಗೃತಿ ಜೆ. ನಾಯಕ್ ಅವರು, ರಾಜ್ಯಕ್ಕೆ ತೃತೀಯ ಸ್ಥಾನವನ್ನು, ದ.ಕ. ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ್ರದಲ್ಲಿ 100, ಗಣಿತಶಾಸ್ತ್ರದಲ್ಲಿ 100, ಜೀವಶಾಸ್ತ್ರದಲ್ಲಿ 96, ಇಂಗ್ಲಿಷ್ 97 ಮತ್ತು ಸಂಸ್ಕೃತದಲ್ಲಿ 99 ಅಂಕಗಳನ್ನು ಪಡೆಯುವುದರ ಮೂಲಕ ಒಟ್ಟು 592 ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಇವರು ಕಲ್ಲಾರೆ, ಪುತ್ತೂರು ಇಲ್ಲಿಯ ಜಗನ್ನಾಥ್ ನಾಯಕ್ ಮತ್ತು ಜ್ಯೋತಿ ನಾಯಕ್ ದಂಪತಿಗಳ ಪುತ್ರಿ.
586 ಅಂಕಗಳನ್ನು ಗಳಿಸುವುದರ ಮೂಲಕ ಆಶ್ವಿಜ ಪಿ. ಎಸ್,. ಅವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ಪೆರ್ಲದ ಪ್ರಭಾಕರ ನಾಯಕ್ ಪಿ. ಮತ್ತು ಸುರೇಖ ಕೆ. ಎನ್. ಅವರ ಸುಪುತ್ರಿ.
ವಾಣಿಜ್ಯ ವಿಭಾಗದಲ್ಲಿ ನಿಶ್ಚಲ್ ರೈ 589 ಅಂಕಗಳನ್ನು ಪಡೆಯುವುದರ ಮೂಲಕ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಸುಳ್ಯದ ಅಡ್ಕಾರ್ ಉಮೇಶ್ ರೈ ಮತ್ತು ಸುನೀತಾ ರೈ ಇವರ ಪುತ್ರ.
588 ಅಂಕಗಳನ್ನು ಪಡೆಯುವುದರ ಮೂಲಕ ಯಶ್ವಿತಾ ಕೆ. ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಇವರು ಸುಳ್ಯ ತಾಲೂಕಿನ ವಾಸುದೇವ ಗೌಡ ಮತ್ತು ಪುಷ್ಪಾವತಿ ಕೆ. ದಂಪತಿಗಳ ಪುತ್ರಿ.
ವಾಣಿಜ್ಯ ವಿಭಾಗದ ಶರತ್ ಕುಮಾರ್ ಎನ್. (ನರೇಂದ್ರ ಪದವಿಪೂರ್ವ ಕಾಲೇಜು) ಅವರು ವ್ಯವಹಾರ ಅಧ್ಯಯನದಲ್ಲಿ 100, ಲೆಕ್ಕಶಾಸ್ತ್ರದಲ್ಲಿ 100, ಬೇಸಿಕ್ ಮ್ಯಾತ್ಸ್ 100, ಅರ್ಥಶಾಸ್ತ್ರದಲ್ಲಿ 96, ಕನ್ನಡದಲ್ಲಿ 97, ಇಂಗ್ಲಿಷ್ನಲ್ಲಿ 91 ಹಾಗೂ ಒಟ್ಟು 584 ಅತ್ಯಧಿಕ ಅಂಕಗಳನ್ನು ಗಳಿಸಿರುತ್ತಾರೆ. ಇವರು ಬಲ್ನಾಡು ಗ್ರಾಮದ ಬಾಲಕೃಷ್ಣ ನಾಯಕ್ ಎನ್. ಮತ್ತು ಇಂದಿರಾ ಪಿ. ದಂಪತಿ ಪುತ್ರ.
ಕಲಾ ವಿಭಾಗದಲ್ಲಿ 579 ಅಂಕಗಳನ್ನು ಪಡೆಯುವುದರ ಮೂಲಕ ರುಚಿತಾ ಹೆಗ್ಡೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಇವರು ಕೋಟಾದ ಜಯಾನಂದ ಹೆಗ್ಡೆ ಮತ್ತು ಶಾಲಿನಿ ಜೆ. ಹೆಗ್ಡೆ ದಂಪತಿ ಪುತ್ರಿ,
ಹಾಗೆಯೇ 567 ಅಂಕಗಳನ್ನು ಪಡೆಯುವುದರ ಮೂಲಕ ಅಂಶಿಕಾ ಎಂ. ಎಸ್. ಇವರು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಇವರು ಪುತ್ತೂರಿನ ಶ್ರೀವತ್ಸ ಮತ್ತು ವೀಣಾ ಸರಸ್ವತಿ ಇವರ ಪುತ್ರಿ.
ವಿಜ್ಞಾನ ವಿಭಾಗದ ವಂದಿತಾ ಎಂ ಇವರು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಗಣಕಶಾಸ್ತ್ರ ಈ ಎಲ್ಲಾ ವಿಷಯಗಳಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ. ಇವರು ಸುಳ್ಯದ ಎಂ. ಎನ್ ವೆಂಕಟರಮಣ ಮತ್ತು ವಸಂತಲಕ್ಷ್ಮೀ ದಂಪತಿಗಳ ಪುತ್ರಿ.
ವಾಣಿಜ್ಯ ವಿಭಾಗದ ಶ್ರೀಚೈತ್ರಾ ಡಿ. ಇವರು ಸಂಖ್ಯಾಶಾಸ್ತ್ರ, ಗಣಕಶಾಸ್ತ್ರ, ವ್ಯವಹಾರ ಅಧ್ಯಯನ, ಮತ್ತು ಲೆಕ್ಕಶಾಸ್ತ್ರ, ಈ ಎಲ್ಲಾ ವಿಷಯಗಳಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ. ಇವರು ಬಂಟ್ವಾಳದ ಡಿ ಸುಬ್ರಾಯ ಭಟ್ ಮತ್ತು ಅಶ್ವಿನಿಕುಮಾರಿ ಡಿ ದಂಪತಿಗಳ ಪುತ್ರಿ.
ಪರೀಕ್ಷೆಗೆ ಒಟ್ಟು 1080 ವಿದ್ಯಾರ್ಥಿಗಳು ಹಾಜರಾಗಿದ್ದು 253 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಮತ್ತು 587 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 38 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುತ್ತಾರೆ. ಎಂದು ಕಾಲೇಜುಗಳ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.