Wednesday, November 27, 2024
ಸುದ್ದಿ

ಮಂಗಳೂರು ರಾಮಕೃಷ್ಣಾಶ್ರಮದಲ್ಲಿ ‘ ಯಕ್ಷ ಸಂಭ್ರಮ ‘ | ನಾಲ್ಕು ಪ್ರಸಂಗ ; ದಿಗ್ಗಜ ಕಲಾವಿದರ ಸಮಾಗಮ ; ಸಂಪೂರ್ಣ ಮಾಹಿತಿ

 

ಮಂಗಳೂರು : ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿಯಾದ ಯಕ್ಷಗಾನ ಅತ್ಯಂತ ಹಳೆಯ ಕಲಾಪ್ರಾಕಾರ, ಇದು ಆದರಾಧನಾ ಕಲೆ ಕೂಡ ಹೌದು. ಇದೇ ಬರುವ ಭಾನುವಾರ 3-12-2017 ರಂದು ಬೆಳಗ್ಗೆ 9 ರಿಂದ ರಾತ್ರೆ 9 ರ ವರೆಗೆ ಮಂಗಳೂರಿನ ಮಂಗಳಾದೇವಿಯ ದೇವಾಲಯದ ಪಕ್ಕದಲ್ಲಿರು ವಿವೇಕಾನಂದರ ಪರಂಪರೆಯ ರಾಮಕೃಷ್ಣಾಶ್ರಮ ದಲ್ಲಿ ಆಯ್ದ ಅತ್ಯುತ್ತಮ ಕಲಾವಿದರ ಸಮೂಹದಿಂದ ಅತ್ಯುನ್ನತ ಮಟ್ಟದ ಪ್ರದರ್ಶನ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಭಿನ್ನ ಯಕ್ಷ ಸಂಭ್ರಮ :

ಜಾಹೀರಾತು
ಜಾಹೀರಾತು
ಜಾಹೀರಾತು

ಒಂಬತ್ತು ವರುಷಗಳಿಂದ ರಾಮಕೃಷ್ಣ ಮಠ ಅರ್ಪಿಸುತ್ತ ಬಂದ ಜನಮೆಚ್ಚಿದ ಅಚ್ಚುಕಟ್ಟಿನ ಯಕ್ಷಗಾನವು ” ಆಶ್ರಮದ ಆಟ ” ಎಂದೇ ಪ್ರಸಿದ್ಧಿ ಪಡೆದಿದೆ.

ಪ್ರಸಂಗ – ಸಮಯ – ಕಲಾವಿದರು

೧. ಬೆಳಗ್ಗೆ ೯ – ತೆಂಕು ಆಟ

” ವಿಷ್ಣುಲೀಲೆ “

ಹಿಮ್ಮೇಳ : ಪುತ್ತಿಗೆ, ಪ್ರಸಾದ್ ಬಲಿಪ, ದೇಲಂತಮಜಲು, ಚೈತನ್ಯ

ಮುಮ್ಮಳ :
* ಹೊಳ್ಳರ ಪರಂಪರೆಯ ಒಡ್ಡೋಲಗದ ದೇವೇಂದ್ರ
* ನಾವಡ, ಪೆರ್ಮುದೆ ಎರಡು ತಮಾಸುರರು
* ಕಾರ್ಕಳರ ವಿಶಿಷ್ಟ ಖ್ಯಾತಿದೇವಿ
* ಸುಣ್ಣಂಬಳ-ರಂಗಾಭಟ್ ವಾಗ್ವೈಖರಿ
* ಶೆಟ್ಟಿಗಾರರ ಮತ್ಸ್ಯಾವತಾರ
ಇತ್ಯಾದಿ
➖➖➖➖➖➖➖➖➖➖➖
೨. ಮಧ್ಯಾಹ್ನ ೧

” ವಿಶೇಷ ಹಾಸ್ಯತ್ರಿವೇಣಿ “

ಹಿಮ್ಮೇಳ : ಹಿಲ್ಲೂರು, ಭಂಢಾರಿ, ಸಂಪ

ಮುಮ್ಮೇಳ :
* ಚಪ್ಪರಮನೆ- ಕಪ್ಪದ ದೂತ
* ಕಾಸರಕೋಡು- ಬಲರಾಮದೂತ
* ಚಪ್ಪರಮನೆ – ಕೈಲಾಸ ಶಾಸ್ತ್ರಿ vs ಕಾಸರಕೋಡು – ಕಾಶಿಮಾಣಿ
➖➖➖➖➖➖➖➖➖➖➖


೩. ಮಧ್ಯಾಹ್ನ ೨.೩೦ ಬಡಗಿನ ಆಟ

” ರಣವೀಳ್ಯ “

ಹಿಮ್ಮೇಳ : ಕೊಳಗಿ, ಬೊಳ್ಗೆರೆ, ಸಂಪ

ಮುಮ್ಮೇಳ :
* ಬಳ್ಕೂರರ ಕೌರವನ ಎದುರು ಕೊಂಡದಕುಳಿ ಕೃಷ್ಣ
* ತೋಟಿಮನೆ ಭೀಮನ ಜೊತೆ ಯಲಗುಪ್ಪ ದ್ರೌಪದಿ
* ಚಪ್ಪರಮನೆಯವರ ವಿಶೇಷ ಭಕ್ತಿರಸ

ಇತ್ಯಾದಿ
➖➖➖➖➖➖➖➖➖➖➖

೪. ಸಂಜೆ ೬ ಬಡಗಿನ ಆಟ

” ದ್ರೌಪದಿ ಪ್ರತಾಪ “

ಹಿಮ್ಮೇಳ : ಜನ್ಸಾಲೆ ಹಿಲ್ಲೂರು ದ್ವಂದ್ವ
ಭಂಢಾರಿ, ಪ್ರಭು

ಮುಮ್ಮೇಳ :
ನೀಲ್ಕೋಡು ದ್ರೌಪದಿ ಎದುರು
ಬೆಳಿಯೂರು ಭೀಮ, ಪ್ರಸನ್ನ ಶೆಟ್ಟಿಗಾರ್ ಅರ್ಜುನ

ಇತ್ಯಾದಿ
➖➖➖➖➖➖➖➖➖➖➖

ಅಲ್ಲದೇ, ಪ್ರೇಕ್ಷಕರಿಗೆ ಉಚಿತ ಪ್ರವೇಶ, ಊಟ ಉಪಾಹಾರ ವ್ಯವಸ್ಥೆ ಇದೆ. ಆಶ್ರಮದ ಪ್ರಶಾಂತ ವಾತಾವರಣ.

Leave a Response