Recent Posts

Saturday, September 21, 2024
ಸುದ್ದಿ

ಹೆಚ್ಚುವರಿ ಭದ್ರತಾ ದೃಷ್ಟಿಯಿಂದ ಮಂಗಳೂರು ಎಸ್.ಪಿ.ಲಕ್ಷ್ಮೀ ಪ್ರಸಾದ್ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ಭೇಟಿ –ಕಹಳೆ ನ್ಯೂಸ್

ಬಂಟ್ವಾಳ: ಎ.18 ರಂದು ನಡೆಯುವ ಲೋಕಸಭಾ ಚುನಾವಣೆಯ ಬಗ್ಗೆ ಹೆಚ್ಚುವರಿ ಭದ್ರತಾ ದೃಷ್ಟಿಯಿಂದ ಮಂಗಳೂರು ಎಸ್.ಪಿ.ಲಕ್ಷ್ಮೀ ಪ್ರಸಾದ್ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮೊಡಂಕಾಪು ಮಸ್ಟರಿಂಗ್ ಮತ್ತು ಡಿ.ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಪೊಲೀಸರಿಗೆ ಚರ್ಚೆ ನಡೆಸಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು, ಸಮಸ್ಯೆಗಳು ಉದ್ಬವವಾಗದ ರೀತಿಯಲ್ಲಿ ಕಾರ್ಯನಿರ್ವಹಿಸುವ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಎಸ್.ಪಿ.ಲಕ್ಷ್ಮಿಪ್ರಸಾದ್ ಎಲ್ಲರೂ ಶಾಂತಿ ರೀತಿಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

70 ಸೆಕ್ಟರ್ ಗಳಿಗೆ 287 ಸಿಬ್ಬಂದಿಗಳನ್ನು ಹಾಕಲಾಗಿದೆ. ಪೊಲೀಸಿಂಗ್ ಬೂತ್ ಮತ್ತು ಸೆಕ್ಟರ್ ಗಳಿಗೆ ಸೇರಿ ಹಾಕಲಾಗಿದೆ. 85 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಅಲ್ಲಿಗೆ ಸಿಬ್ಬಂದಿಗಳ ಜೊತೆ ಹೆಚ್ಚು ವರಿಯಾಗಿ ಸಿ.ಆರ್.ಪಿ.ಗಳನ್ನು ಹಾಕಲಾಗಿದೆ. ಎರಡು ಹೆಚ್ಚುವರಿಯಾಗಿ ಬಂಟ್ವಾಳ ಕ್ಕೆ ಕೆ.ಎಸ್.ಆರ್.ಪಿ. ಜೊತೆಗೆ ಹೋಮ್ ಗಾರ್ಡ್ ಸೇರಿದಂತೆ 300 ಸಿಬ್ಬಂದಿ ಗಳು ಕಾರ್ಯನಿರ್ವಹಿಸುತ್ತಾರೆ.

ಜಾಹೀರಾತು

ಇದರಲ್ಲಿ ಎರಡು ಡಿ.ವೈ.ಎಸ್.ಪಿ.ಗಳು ಹಾಗೂ ನಾಲ್ಕು ಪೊಲೀಸ್ ಇನ್ಸ್ ಪೆಕ್ಟರ್ಗಳು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಂತ ರೀತಿಯಲ್ಲಿ ಮತದಾನ ಅಗುವಂತೆ ಎಲ್ಲಾ ರೀತಿಯಲ್ಲಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.
ಮತದಾರರು ಯಾವುದೇ ಭಯವಿಲ್ಲದೆ ಮತದಾನ ಮಾಡುವಂತೆ ಅವರು ಹೇಳಿದರು.