ರೂಪದರ್ಶಿಸಿಯರಿಗೆ ಅನೇಕರು ಐ ಲವ್ ಯು ಹೆಳೋದು ಕೇಳಿದ್ದೇವೆ, ಆದ್ರೆ ಇಲ್ಲೊಂದು ರೂಪದರ್ಶಿನಿಗೆ ಕಾಂಗ್ರೆಸ್ ಅಧ್ಯಕ್ಷರ ರಾಹುಲ್ ಮೇಲೆ ಲವ್ ಆಗಿದೆ ಅಂತ ಹೇಳಿಕೊಂಡಿದ್ದಾಳೆ.
ರೂಪದರ್ಶಿ,ನಟಿ ಮಹಿಕಾ ಶರ್ಮಾಗೆ ರಾಹುಲ್ ಮೇಲೆ ಪ್ರೀತಿಯಾಗಿದೆ. ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಮಹಿಕಾ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ. ರಾಹುಲ್ ಫೋಟೋ ಹಂಚಿಕೊಂಡಿರುವ ನಟಿ ರಾಹುಲ್ ಗಾಂಧಿ ಒಬ್ಬ ರಾಜನಿದ್ದಂತೆ, ವಿಚಿತ್ರ ಮಾತುಗಳಿಂದ ಜನರನ್ನು ನಗಿಸುವ ಗುಣವಿರುವುದೇ ನನಗೆ ಬಹಳ ಇಷ್ಟ ಎಂದಿದ್ದಾರೆ.
ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಇಂಥದ್ದೊಂದು ಪ್ರೇಮ ಕತೆ ಅನಾವರಣ ಆಗಿದೆ.