Recent Posts

Saturday, September 21, 2024
ಸುದ್ದಿ

ಮಳೆ ಅವಾಂತರ 34 ಮಂದಿ ಸಾವು – ಕಹಳೆ ನ್ಯೂಸ್

ಮಧ್ಯ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಮಳೆ, ಗುಡುಗು, ಸಿಡಿಲು, ಬಿರುಗಾಳಿಯ ಹೊಡತಕ್ಕೆ ಸಿಲುಕಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ, ಇನ್ನು ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಮಳೆ, ಬಿರುಗಾಳಿ, ಗುಡುಗು, ಸಿಡಿಲು, ಮಿಂಚಿನ ಹೊಡೆತಕ್ಕೆ ಒಟ್ಟು ಕನಿಷ್ಠ 34 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಖಾರ್‌ಗೊನೆ ಜಿಲ್ಲೆಯಲ್ಲಿ ಮಳೆ ಸಂಬಂಧಿ ದುರಂತಕ್ಕೆ ಹಲವಾರು ಮನೆ – ಗುಡಿಸಲುಗಳು ಧಾರಾಶಾಹಿಯಾಗಿವೆ. ಖಾರ್‌ಗೊನೆ, ಉಪಾಡಿ, ಬಡಾ, ಪ್ರೇಮ್ ನಗರ್ ಗೊಗೋವಾನ್ ಮತ್ತು ಭೋಯಿನಂದಾ ಗ್ರಾಮಗಳಲ್ಲಿ ಮಳೆ ಸಂಬಂಧಿ ದುರಂತಗಳು ಅತ್ಯಧಿಕ ಸಂಖ್ಯೆಯಲ್ಲಿ ಘಟಿಸಿವೆ.
ಮಂಗಳವಾರ ಸಂಜೆ ಹಾಥೋಡ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಜಮೂದಿರ್ ಸರವಾರ್ ಗ್ರಾಮದಲ್ಲಿ ಹಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಾಹೀರಾತು

ಇನ್ನೊಂದು ಜಿಲ್ಲೆಯಲ್ಲಿ ಸಿಡಿಲ ಹೊಡೆತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಒಬ್ಬ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರು ಪ್ರತ್ಯೇಕ ಗ್ರಾಮಗಳಲ್ಲಿ 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.