ಲೋಕಸಭಾ ಚುನಾವಣೆ ರಂಗೇರಿದ್ದು ನಾಳೆ ಮತದಾನ ನಡೆಯಲಿದೆ, ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪರ ವಿರೋದ ಮಾತುಗಳು ಕೇಳಿ ಬರುತ್ತಲೆ ಇದೆ, ಅಂತೆಯೇ ಇದೀಗಾ ಪ್ರತಾಪ್ ಸಿಂಹ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿಯೋರ್ವಳು ಆರೋಪಿಸಿದ್ದು, ಈ ಬಗ್ಗೆ ಪ್ರತಾಪ್ ಸಿಂಹ ಅವರದ್ದು ಎನ್ನಲಾದ ವಾಟ್ಸ್ ಆಯಪ್ ಚಾಟ್, ಆಡಿಯೊ ವೈರಲ್ ಆಗಿದೆ.
“ಪ್ರತಾಪ್ ಸಿಂಹ ನನ್ನನ್ನು ಸೇರಿದಂತೆ ಅನೇಕ ಹುಡುಗಿಯರಿಗೆ ಮೋಸ ಮಾಡಿದ್ದಾನೆ. ಈತ ಒಳ್ಳೆಯವನ ರೀತಿ ನಟಿಸಿ ನಂತರ ಆತನ ಆಸೆ ಪೂರೈಸಿಕೊಂಡು ಕೈ ಬಿಡುತ್ತಾನೆ. ನನಗೆ ಸ್ನೇಹಿತನ ರೀತಿ ಪರಿಚಯವಾದ ವ್ಯಕ್ತಿ ನಂತರ ಬಣ್ಣ ಬಣ್ಣದ ಮಾತುಗಳನ್ನು ಆಡಿ ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ” ಎಂದು ಯುವತಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.
“ತಡರಾತ್ರಿಯಲ್ಲಿ ಫೋನ್ ಮಾಡುವುದು, ಕೆಟ್ಟದಾಗಿ ಮಾತನಾಡುವುದು ಮತ್ತು ಯುವತಿಯರ ದೇಹ ಸೌಂದರ್ಯವನ್ನು ವರ್ಣನೆ ಮಾಡುವುದು ಸೇರಿದಂತೆ ಅನೇಕ ರೀತಿಯಲ್ಲಿ ತೊಂದರೆ ನೀಡುತ್ತಿದ್ದ, ಇದರಿಂದ ಸಾಕಷ್ಟು ಬಾರಿ ನಾನು ಬೈದಿದ್ದೇನೆ” ಎಂದು ಯುವತಿ ದೂರಿದ್ದಾರೆ.
ಯುವತಿ ಮತ್ತು ಪ್ರತಾಪ್ ಸಿಂಹ ಜೊತೆಗಿರುವುದು ಎನ್ನಲಾದ ಫೋಟೊಗಳು ಮತ್ತು ಅವರಿಬ್ಬರ ನಡುವಿನ ಫೋನ್ ಸಂಭಾಷಣೆಗಳದ್ದು ಎನ್ನಲಾದ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಯುವತಿಯ ಆರೋಪದ ಬಗ್ಗೆ ಪ್ರತಾಪ್ ಸಿಂಹರ ಪ್ರತಿಕ್ರಿಯೆಗಾಗಿ ದೂರವಾಣಿ ಮೂಲಕ ಸಂಪರ್ಕಕ್ಕೆ ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿದೆ.