Wednesday, November 27, 2024
ಸುದ್ದಿ

ಕೇಸರಿ-ಹಸಿರು ಬಂಟಿಂಗ್ ವಿವಾದ: ಮಂಗಳೂರಿನಲ್ಲಿ ಗುಂಪು ಘರ್ಷಣೆ

ಮಂಗಳೂರು: ಕೇಸರಿ-ಹಸಿರು ಬಂಟಿಂಗ್‌ಗಳು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾದ ಘಟನೆ ಕಳೆದ ರಾತ್ರಿ ಮಂಗಳೂರು ಸಮೀಪದ ಕಾಟಿಪಳ್ಳದಲ್ಲಿ ನಡೆದಿದೆ.

ಉಡುಪಿಯಲ್ಲಿ ನಡೆದ ಧರ್ಮ ಸಂಸದ್‍ಗೆ ಸಂಬಂಧಿಸಿ ಕಾಟಿಪಳ್ಳದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂತ್ವವಾದಿ ಸಂಘಟನೆಗಳು ಕೇಸರಿ ಬಂಟಿಂಗ್‍ಗಳನ್ನು ಹಾಕಿದ್ದರು. ಧರ್ಮ ಸಂಸದ್ ನವೆಂಬರ್ 26ರಂದು ಮುಗಿದಿತ್ತು. ಇದೀಗ ಮುಸ್ಲಿಮರ ಹಬ್ಬ ಈದ್ ಮಿಲಾದ್ ಸನಿಹದಲ್ಲಿದ್ದು ಮುಸ್ಲಿಮ್ ಯುವಕರು ಹಬ್ಬದ ಪ್ರಯುಕ್ತ ಕಾಟಿಪಳ್ಳದಲ್ಲಿ ಹಸಿರು ಬಂಟ್ಂಗ್‍ಗಳನ್ನು ಹಾಕಿ ಸಿಂಗರಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಸಿರು ಬಂಟಿಂಗ್‌ಗಳನ್ನು ಹಾಕುತ್ತಿದ್ದ ಕಂಬಗಳಲ್ಲಿ ಕೇಸರಿ ಬಂಟಿಂಗ್‌ಗಳೂ ಇದ್ದವು. ಹಸಿರು ಬಂಟಿಂಗ್‌ಗಳನ್ನು ಹಾಕುತ್ತಿದ್ದ ವೇಳೆ ಒಂದು ಕಂಬದಿಂದ ದರ್ಮ ಸಂಸದ್‌ಗೆ ಹಾಕಿದ್ದ ಕೇಸರಿ ಬಂಟಿಂಗ್‌ಗಳು ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಗಮನಿಸಿದ ಸ್ಥಳೀಯ ಕೆಲ ಹಿಂದೂ ಯುವಕರು ಮುಸ್ಲಿಮ್ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಉದ್ದೇಶಪೂರ್ವಕವಾಗಿ ಕೇಸರಿ ಬಂಟಿಂಗ್‌ಗಳನ್ನು ಮುಸ್ಲಿಮ್ ಯುವಕರು ಕಿತ್ತು ಎಸೆದಿದ್ದಾರೆ ಎಂದು ಹಿಂದೂತ್ವವಾದಿ ಸಂಘಟನೆಗಳ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ತಕ್ಷಣವೇ ಎರಡೂ ಕಡೆಗಳ ಯುವಕರು ಅಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಪರಿಸ್ಥಿತಿಯನ್ನು ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದು ಎರಡೂ ಗುಂಪುಗಳ ಯುವಕರನ್ನು ಚದುರಿಸಿದ್ದಾರೆ. ಬಳಿಕವಷ್ಟೆ ಎರಡೂ ಗುಂಪುಗಳ ಯುವಕರು ಸ್ಥಳದಿಂದ ತೆರಳಿದ್ದಾರೆ.
ಹಿಂದೂ -ಮುಸ್ಲಿಮರು ಪರಸ್ಪರ ಒಟ್ಟಾಗಿ ಬಾಳಬಾರದು ಎಂಬ ಸನ್ನಿವೇಶವನ್ನು ಕರಾವಳಿಯಲ್ಲಿ ಕೆಲ ಸಂಘಟನೆಗಳು ನಿರ್ಮಾಣ ಮಾಡುತ್ತಿವೆ. ಕೇಸರಿ-ಹಸಿರು ಬಣ್ಣದ ನಿರ್ಜೀವ ಬಂಟಿಂಗ್‌ಗಳೂ ಕೂಡ ಒಟ್ಟಾಗಿ ಇರಕೂಡದು ಎಂಬ ಗಲಾಟೆಯೂ ಈ ಮನಸ್ಥಿತಿಯ ಭಾಗವೇ ಆಗಿದೆ ಎಂದು ಸ್ಥಳೀಯರೊಬ್ಬರು ಹೇಳುತ್ತಿದ್ದುದು ಕೇಳಿಬಂದಿದೆ.

( ಚಿತ್ರ ಸಾಂದರ್ಭಿಕ )

Leave a Response