Recent Posts

Sunday, September 22, 2024
ಸುದ್ದಿ

ಅಬ್ಬಬ್ಬಾ..ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅರುಣ್ ಸಾಗರ್ ಪುತ್ರ – ಕಹಳೆ ನ್ಯೂಸ್

ಸಾಮಾನ್ಯವಾಗಿ ನಟರ ಮಕ್ಕಳ ಕಣ್ಣು ಚಿತ್ರರಂಗದ ಮೇಲೆ ಇರುತ್ತದೆ. ಅಪ್ಪನ ರೀತಿಯ ಬಣ್ಣದ ಲೋಕಕ್ಕೆ ಬರಬೇಕು ಎನ್ನುವ ಆಸೆ, ಕನಸು ಬಾಲ್ಯದಲ್ಲಿಯೇ ಹುಟ್ಟಿಕೊಳ್ಳುತ್ತದೆ. ಹೀಗಿದ್ದರೂ, ಕೆಲವು ಮಕ್ಕಳು ಅಪ್ಪನ ಕ್ಷೇತ್ರಕ್ಕಿಂತ ವಿಭಿನ್ನವಾಗಿ ಬೆಳೆದು ತೋರಿಸುತ್ತಾರೆ. ನಟ ಅರುಣ್ ಸಾಗರ್ ಪುತ್ರ ಸಹ ಈಗ ಕ್ರೀಡಾ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ವಿದೇಶಿ ಕ್ರೀಡೆ ಮಾಕ್ಸ್ ಮೌಥಾಯ್‍ಯಲ್ಲಿ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ತುತ್ತಾ ಮುತ್ತಾ’ ಕಾರ್ಯಕ್ರಮದಲ್ಲಿ ಅರುಣ್ ಸಾಗರ್ ಮತ್ತು ಕುಟುಂಬ
ಅರುಣ್ ಸಾಗರ್ ಪುತ್ರನ ಸಾಧನೆಯನ್ನು ಚಿತ್ರರಂಗದ ಪ್ರಮುಖರು ಕೊಂಡಾಡಿದ್ದಾರೆ. ನಟ ಸುದೀಪ್, ಧ್ರುವ ಸರ್ಜಾ, ಅರ್ಜುನ್ ಸರ್ಜಾ, ನಿರ್ದೇಶಕ ಯೋಗರಾಜ್ ಭಟ್ ಮೆಚ್ಚುಗೆ ಸೂಚಿಸಿದ್ದಾರೆ.

ಜಾಹೀರಾತು

ಭಾರತ ಗೆಲುವು ತಂದು ಕೊಟ್ಟ ಸೂರ್ಯ ಸಾಗರ್
ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮೌಥಾಯ್ ಸ್ಪರ್ಧೆ ಥಾಯ್ಲಂಡ್ ನ ಪಟಾಯಲ್ಲಿ ನಡೆದಿತ್ತು. ಇದರಲ್ಲಿ ವಿವಿಧ ದೇಶಗಳು ಭಾಗಿಯಾಗಿದ್ದವು. 21 ವರ್ಷದ ಸೂರ್ಯ ಭಾರತವನ್ನು ಪ್ರತಿನಿಧಿಸಿದ್ದರು. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಭಾರತಕ್ಕೆ ಗೆಲುವು ಸಿಕ್ಕಿದೆ. ಥಾಯ್ ಫೈಟರ್ ಅಪಿರ್ಂಗ್ ಚಿತಾಂಗ್ ವಿರುದ್ಧ ಸೂರ್ಯ ಗೆಲುವು ಸಾಧಿಸಿದ್ದರು. ಮಗನ ಸಾಧನೆ ಕಂಡು ಅರುಣ್ ಸಾಗರ್ ಬಹಳ ಖುಷಿಯಾಗಿದ್ದಾರೆ. ”ಸೂರ್ಯ ಮೌಥಾಯ್ ನಲ್ಲಿ ತರಬೇತಿ ಪಡೆಯುತ್ತೇನೆ ಎಂದಾಗ ತುಂಬಾ ಖುಷಿ ಆಯಿತು. ಅವನ ಕನಸಿಗೆ ಪೂರಕ ವಾತಾವರಣ ಕಲ್ಪಿಸಿ ಕೊಟ್ಟೆವು. ಈಗ ಅವನು ಭಾರತವೇ ಹೆಮ್ಮೆ ಪಡುವಂಥ ಕೆಲಸ ಮಾಡಿದ್ದಾನೆ.” ಎಂದು ಸಂತಸ ಹಂಚಿಕೊಂಡಿದ್ದಾರೆ.

ಸೂರ್ಯ ಪ್ರತಿಭೆ ಬಗ್ಗೆ ನಟ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ. ”ಮೂರು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದ ಸೂರ್ಯ, ಕಡಿಮೆ ಸಮಯದಲ್ಲೇ ಅಗಾಧ ಸಾಧನೆ ಮಾಡಿದ್ದಾನೆ. ಅವರಿಂದ ಮತ್ತಷ್ಟು ಸಾಧನೆ ನಿರೀಕ್ಷೆ ಮಾಡುವೆ” ಎಂದು ಬರೆದುಕೊಂಡಿದ್ದಾರೆ.”ಸೂರ್ಯನ ಸಾಧನೆಗೆ ಭಾರತೀಯನಾಗಿ ನಾನು ಹೆಮ್ಮೆ ಪಡುತ್ತೇನೆ” ಎಂದು ಅರ್ಜುನ್ ಸರ್ಜಾ ವಿಶ್ ಮಾಡಿದ್ದಾರೆ. ಜೊತೆಗೆ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಚಪ್ಪಾಳೆ ತಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಟ್ಟರು ಸೂರ್ಯ ಸಾಧನೆಯನ್ನು ಕೊಂಡಾಡಿದ್ದಾರೆ.

ಒಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆ
ಸೂರ್ಯ ಸತತ ಮೂರು ವರ್ಷಗಳಿಂದ ಮೈಸೂರಿನ ವಿಕ್ರಮ್ ನಾಗರಾಜ್ ಬಳಿ ಮೌಥಾಯ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಥಾಯ್ಲಂಡ್ ನಲ್ಲಿ ನಡೆದ ಸ್ಪರ್ಧೆ ಗೆದ್ದಿರುವ ಸೂರ್ಯನಿಗೆ ಒಲಂಪಿಕ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಯಿದ್ದು, ಅದಕ್ಕಾಗಿ ಅವರು ಈಗಿನಿಂದಲೇ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ.