Monday, January 27, 2025
ಸುದ್ದಿ

ಬಂಟ್ವಾಳ ಕ್ಷೇತ್ರದುದ್ದಕ್ಕೂ ಶಾಂತಿಯುತ ಚುನಾವಣೆ : ಸಹಾಯಕ ಚುನಾವಣಾಧಿಕಾರಿ ಮಹೇಶ್ – ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ಕ್ಷೇತ್ರದುದ್ದಕ್ಕೂ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಸಂಜೆ 5 ಗಂಟೆವರೆಗೆ ಶೇ.75.65 ಮತ ಚಲಾವಣೆಯಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಹೇಶ್ ತಿಳಿಸಿದ್ದಾರೆ.

5 ಕಡೆಗಳಲ್ಲಿ ಮತಯಂತ್ರದಲ್ಲಿ ತಾಂತ್ರಿಕ ತೊಂದರೆಗಳು ಸಂಭವಿಸಿದ್ದು, ಇದರಿಂದ ಮತದಾನ ಪ್ರಕ್ರಿಯೆ ವಿಳಂಬಗೊಂಡರೂ ಬಳಿಕ ಕೂಡಲೇ ಅದನ್ನು ಸರಿಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ಕುರಿತು ಪ್ರಕರಣಗಳು ದಾಖಲಾಗಿಲ್ಲ, ನಕಲಿ ಮತದಾನದ ಘಟನೆಗಳೂ ಆಗಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಷೇತ್ರದ ಮತಗಟ್ಟೆ ಸಂಖ್ಯೆ 21ರ ಮೂಡುಪಡುಕೋಡಿ, 75ರ ಕಾವಳಪಡೂರು ಮಧ್ವ, 52ರ ನಲ್ಕೆಮಾರು, 244ರ ಕನ್ಯಾನ ಬಂಡಿತ್ತಡ್ಕ, 211ರ ನೇರಳಕಟ್ಟೆಗಳಲ್ಲಿ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು ಎಂದು ಅವರು ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿ 15 ಕಡೆಗಳಲ್ಲಿ ವೆಬ್ ಕಾಸ್ಟಿಂಗ್, 15 ಕಡೆಗಳಲ್ಲಿ ವಿಡಿಯೋ ರೆಕಾಡಿರ್ಂಗ್ ಮತ್ತು 35 ಕಡೆಗಳಲ್ಲಿ ಮೈಕ್ರೋ ಆಬ್ಸರ್ವರ್‌ಗಳ ನಿಗಾ ಇದ್ದ ಕಾರಣ ಸಮಸ್ಯೆಗಳು ಉಂಟಾಗಲಿಲ್ಲ. ಕ್ಷೇತ್ರದ 248 ಮತಗಟ್ಟೆಗಳಲ್ಲಿ ಒಂದು ಸಾವಿರಕ್ಕಿಂತ ಹೆಚ್ಚಿನ ಮತದಾರರಿದ್ದ ಕಡೆಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಬಳಸಲಾಗಿತ್ತು. 21 ಸೆಕ್ಟರ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲರೂ ಶಾಂತಿಯುತ ಚುನಾವಣೆಗೆ ಸಹಕಾರ ನೀಡಿದ್ದಾರೆ ಎಂದರು.

ಸಂಜೆ 5 ಗಂಟೆವರೆಗೆ 1,68,062 ಮತ ಚಲಾವಣೆಯಾಗಿದ್ದು, ಇದರಲ್ಲಿ 81,622 ಪುರುಷರು ಮತ್ತು 86,440 ಮಹಿಳೆಯರು ಸೇರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 222166 ಮತದಾರರಿದ್ದು, 112810 ಮಹಿಳೆಯರು, 109351 ಪುರುಷ ಮತದಾರರಿದ್ದು, 5 ಇತರೆ ಮತದಾರರಿದ್ದಾರೆ. ಸ್ವೀಪ್ ಸಹಿತ ಮತದಾನದ ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದ್ದ ಕಾರಣ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ ಎಂದು ಅವರು ವಿವರಿಸಿದರು.

ಜಿ.ಪಂ.ಸಿಇಓ ಡಾ.ಸೆಲ್ವಮಣಿ ಮೊಡಂಕಾಪಿನ ಮಸ್ಟರಿಂಗ್ ಕೇಂದ್ರ ಸೇರಿದಂತೆ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿದ್ದಾರೆ. ಎಲ್ಲಾ ಯಂತ್ರಗಳ ಪರಿಶೀಲನೆಯ ಬಳಿಕ ಸುರತ್ಕಲ್ ಎನ್.ಐ.ಟಿ.ಕೆ.ಯ ಭದ್ರತಾ ಕೊಠಡಿಗೆ ಸಾಗಿಸಲಾಗಿದೆ ಎಂದು ಎಆರ್ ಒ ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸಣ್ಣರಂಗಯ್ಯ, ತಾ.ಪಂ.ಇಒ ರಾಜಣ್ಣ ಉಪಸ್ಥಿತರಿದ್ದರು.