Saturday, January 25, 2025
ಸುದ್ದಿ

ಮದುವೆ ಆದ ಮರುದಿನವೇ ಮದುಮಗ ಕರ್ತವ್ಯಕ್ಕೆ ಹಾಜರು – ಕಹಳೆ ನ್ಯೂಸ್

ಬಂಟ್ವಾಳ : ಮದುವೆ ಆದ ಮರುದಿನವೇ ಮದುಮಗ ಕರ್ತವ್ಯಕ್ಕೆ ಹಾಜರಾದ ಘಟನೆಯೊಂದು ನಡೆದಿದೆ. ಬಂಟ್ವಾಳ ವೃತ್ತದ ವಿಟ್ಲ ಪೋಲೀಸ್ ಠಾಣೆಯ ಎಸ್.ಐ.ಯಲ್ಲಪ ಅವರ ವಿವಾಹವು ಎ.10 ರಂದು ದಾವಣಗೆರೆ ಯಲ್ಲಿ ಅಮೃತಾ ಅವರೊಂದಿಗೆ ನಡೆಯಿತು. ಏಪಿಲ್ 11ರಂದು ಯಲ್ಲಪ್ಪಾ ಮನೆಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು ಮರುದಿನವೇ ಯಲ್ಲಪ್ಪ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಚುನಾವಣೆಯ ಈ ಸಮಯದಲ್ಲಿ ರಜೆ ನೀಡದ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ರಮ ಮುಗಿದ ಕೂಡಲೇ ಕರ್ತವ್ಯ ಕ್ಕೆ ಹಾಜರಾಗಿ ನಿಷ್ಠೆ ಮೆರೆದಿದ್ದಾರೆ. ಮದುವೆ ಅರತಕ್ಷತೆ ಕಾರ್ಯಕ್ರಮ ಮುಗಿದ ಕೂಡಲೇ ಕರ್ತವ್ಯ ಕ್ಕೆ ಹಾಜರಾಗಿ ಮೇಲಾಧಿಕಾರಿಗಳಿಂದಲೂ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು