Friday, January 24, 2025
ಸುದ್ದಿ

ಬಂಟ್ವಾಳದಲ್ಲಿ ಮೂರು ನಕಲಿ ಮತದಾನಕ್ಕೆ ಯತ್ನ – ಕಹಳೆ ನ್ಯೂಸ್

Policemen simulate an arrest during national security day in Nice, southeastern France, October 10, 2009. REUTERS/Eric Gaillard (FRANCE CRIME LAW SOCIETY)

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಮೂರು ನಕಲಿ ಮತದಾನದ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಕೈಕಂಬ ಸಮೀಪದ ಪರ್ಲೀಯಾ ಸರಕಾರಿ ಶಾಲೆಯಲ್ಲಿ ನಕಲಿ ಮತದಾನ ಮಾಡಲು ಯತ್ನಿಸುವ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರೂ ಕೂಡ ಬೇರೊಬ್ಬರ ಹೆಸರನ್ನು ಬಳಕೆ ಮಾಡಿ ಮತದಾನಕ್ಕೆ ಯತ್ನಿಸಿದ್ದರು ಎಂದು ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಅಂತೆಯೇ ಕಲ್ಲಡ್ಕದ ಗ್ರಾ.ಪಂ. ಕಟ್ಟಡದಲ್ಲಿನ ಮತಗಟ್ಟೆಯ ನೆಟ್ಲ ಬೂತ್‍ನಲ್ಲಿ ಇದೇ ರೀತಿ ನಕಲಿ ಮತದಾನ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಬಂಟ್ವಾಳ ನಗರ ಠಾಣಾ ಎಸ್.ಐ. ಚಂದ್ರಶೇಖರ್ ಅವರು ಮೂವರನ್ನು ನಗರ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು