Friday, January 24, 2025
ಸುದ್ದಿ

ಬೆಳಗಿನ ಉಪಹಾರದಲ್ಲಿ ಹಲ್ಲಿ – ಕಹಳೆ ನ್ಯೂಸ್

ಕಡಬ ಬಿಳಿನೆಲೆ ಬೂತ್ ನಂಬರ್ 110 ಮತ್ತು 111 ರಲ್ಲಿ ಬೆಳಗಿನ ಉಪಹಾರದಲ್ಲಿ ಹಲ್ಲಿ  ಬಿದ್ದ ಕಾರಣ ಚುನಾವಣಾ ಕರ್ತವ್ಯದಲ್ಲಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಜಯಪ್ರಕಾಶ್,ಹಾಗೂ ಬೆಳ್ಳಾರೆ ಗ್ರಾಮ ಪಂಚಾಯತ್ ಸಿಬ್ಬಂದಿ ರಾಜೇಂದ್ರನ್ ಎಂಬವರಿಗೆ ಸ್ವಲ್ಪ ಮಟ್ಟದ ಅಸ್ವಸ್ಥತೆ ಉಂಟಾಗಿದೆ. ಈ ನಿಮಿತ್ತ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಆಗಿದ್ದಾರೆ ಎಂಬುದಾಗಿ ಬೂತ್ ಚುನಾವಣಾ ಅಧಿಕಾರಿ ಶ್ರೀಮತಿ ಕಮಲ ಅವರಿಂದ ಮಾಹಿತಿ ನೀಡಿದ್ದಾರೆ. ಇನ್ನು “ನಾವೆಲ್ಲರೂ ಅದೇ ಉಪಹಾರ ಸೇವಿಸಿದ್ದೇವೆ ಯಾವುದೇ ತೊಂದರೆ ಆಗಿಲ್ಲ” ಎಂಬುದಾಗಿ ಚುನಾವಣಾ ಅಧಿಕಾರಿಯಿಂದ ಮಾಹಿತಿ ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು