Thursday, January 23, 2025
ಸುದ್ದಿ

ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಎಂಬ ಯುವತಿಯ ಅನುಮಾನಾಸ್ಪದ ಸಾವು – ಕಹಳೆ ನ್ಯೂಸ್

ಏಪ್ರಿಲ್ 16 ರಂದು 23 ವರ್ಷ ವಯಸ್ಸಿನ ಮಧು ಪತ್ತಾರ ಎಂಬ ಯುವತಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ರಾಯಚೂರಿನ ಮಾಣಿಕ್ ಪ್ರಭು ದೇವಾಲಯದ ಗುಡ್ಡದ ಮರವೊಂದರಲ್ಲಿ ಪತ್ತೆಯಾಗಿತ್ತು. ರಾಯಚೂರಿನ ಐಡಿಎಸ್ ಎಂಟಿ ಬಡಾವಣೆಯ ನಾಗರಾಜ ಪತ್ತಾರ ಎಂಬುವವರ ಮಗಳು ಮಧು ಪತ್ತಾರ, ಏಪ್ರಿಲ್ 15 ರಂದು ಕಾಲೇಜಿಗೆಂದು ತೆರಳಿದವಳು ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ತಂದೆ-ತಾಯಿ ಎಲ್ಲೆಡೆಯೂ ಹುಡುಕಿದಾಗ ದೇವಾಲಯದ ಬಳಿ ಆಕೆಯ ಶವ ಪತ್ತೆಯಾಗಿದೆ. ಆದರೆ ಮಧು ಆತ್ಮಹತ್ಯೆ ಮಾಡಿಕೊಳ್ಳುವಂಥ ದುರ್ಬಲ ಮನಸ್ಸಿನ ಹುಡುಗಿಯಲ್ಲ, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ದೂರಿ ಆಕೆಯ ತಂದೆ ನಾಗರಾಜ ಪತ್ತಾರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ರಾಯಚೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳ ಅನುಮಾನಾಸ್ಪದ ಸಾವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಲೋಕಸಭೆ ಚುನಾವಣೆಯ ಸದ್ದಿನಲ್ಲಿ ಸುದ್ದಿಯೇ ಆಗದಿದ್ದ ಈ ಘಟನೆ, ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿದ ನಂತರ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧು ದೇಹದಲ್ಲಿ ಸುಟ್ಟ ಗಾಯಗಳೂ ಪತ್ತೆಯಾಗಿದ್ದು, ಆಕೆಗೆ ಹಿಂಸೆ ನೀಡಿ, ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆಯೆಂದು ದೂರಲಾಗುತ್ತಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಜಸ್ಟೀಸ್ ಫಾರ್ ಮಧು ಹ್ಯಾಶ್ ಟ್ಯಾಗ್ ಮೂಲಕ ಆಕ್ರೋಶ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧು ಸಾವಿಗೆ ಯಾರು ಕಾರಣ?
“ಇಂದು ನಿನ್ನ ಹುಟ್ಟಿದ ದಿನ. ಆದರೆ ನಾವು ನಿನ್ನೆ ನಿನ್ನ ಅಂತ್ಯ ಕ್ರಿಯೆ ಮುಗಿಸಿ ಬಂದು ಕುಳಿತಿದ್ದೇವೆ. ನೀವು ಆತ್ಮಹತ್ಯೆ ಮಾಡಿಕೊಂಡಿದ್ದೆ ಎಂದು ವದಂತಿ ಹಬ್ಬಿದೆ. ನೀನು ಬರೆದ ಡೆತ್ ನೋಟ್ ನಲ್ಲಿ ನಾನು ಇಂಜಿನಿಯರಿಂಗ್ ನ ಕೆಲವು ವಿಷಯಗಳಲ್ಲಿ ಫೇಲ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆಸಿದ್ದಾರೆ. ಆದರೆ ನೀನು ಯಾವುದರಲ್ಲೂ ಫೇಲ್ ಆಗಿರಲಿಲ್ಲ. ಇವೆಲ್ಲವನ್ನೂ ‘ಸುದರ್ಶನ್ ಯಾದವ್’ ಮತ್ತು ಅವರ ಗ್ಯಾಂಗ್ ಮಾಡಿಸಿದೆ. ಸರ್ಕಾರ ಸಂತ್ರಸ್ತೆಯ ಕುಟುಂಬದ ಪರ ನಿಲ್ಲಬೇಕು, ನ್ಯಾಯ ನೀಡಬೇಕು. ನಮಗೆ ಈ ಘಟನೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಮೇಘನಾ ಪತ್ತಾರ್ ಎಂಬುವವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಅನುಮಾನಾಸ್ಪದವಾಗಿ ಸಾವನ್ನಪ್ಪಿದ ನಗರದ ನವೋದಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ(23) ಸಾವು ಪ್ರಕರಣವನ್ನು ತನಿಖೆ ನಡೆಸುವಂತೆ ಒತ್ತಾಯಿಸಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರಿಗೆ ಉಗ್ರ ರೀತಿಯ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಗಿತ್ತು.

ಮಧು ಮೃತದೇಹ ಸೋಮವಾರ ನಗರದ ಮಾಣಿಕ್ ಪ್ರಭು ದೇವಸ್ಥಾನದ ಹಿಂಭಾಗದ ಗಿಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ತರಗತಿಯಲ್ಲಿ ಅನುತ್ತೀರ್ಣಗೊಂಡದಕ್ಕೆ ಡೆತ್ ನೋಟ್ ಬರೆದು ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದರು. ಆದರೆ ವಿದ್ಯಾರ್ಥಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಗೆ ಸಲ್ಲಿಸಿದರು.

ಸಾಮಾಜಿಕ ಜಾಲತಾಣದಲ್ಲಿ ‘ಜಸ್ಟೀಸ್ ಫಾರ್ ಮಧು’ ಎಂಬ ಫೋಸ್ಟ್ ಗಳು ವೈರಲ್ ಆಯಿತು. ಇದೀಗ ದೇಶಾದ್ಯಂತ ಆರೋಪಿಗಳಿಗೆ ಕ್ರೂರ ಶಿಕ್ಷೆ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.