ಮತದಾನ ಅನ್ನೊದು ಪ್ರತಿಯೋಬ್ಬರ ಹಕ್ಕು. ಆದರೆ ಜೀವನದಲ್ಲಿ ಮೊದಲ ಮತದಾನ ಮಾಡಿದ ಜೀವನದ ಮೊದಲ ಮತದಾನ ಮಾಡಿದ ಸವಿ ನೆನಪಿಗಾಗಿ ಬೆಲೂರು ಅರಣ್ಯ ಇಲಾಖೆ ಸಿಂಬ್ಬಂದಿ ನಾಗರಾಜ್ ಪುತ್ರಿ ಬಿ.ಎನ್.ಸಿಂಚನ ತಮ್ಮ ಮನೆ ಮುಂಭಾಗದ ರಸ್ತೆಯಲ್ಲಿ ಗಿಡ ನೆಡುವ ಮೂಲಕ ಮತದಾನ ಜಾಗೃತಿ ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ಕೊಟ್ಟು ಯುವಜನತೆಗೆ ಮಾದರಿಯಾದರು.
ಈ ವೇಳೆ ಸಂತಸ ಹಂಚಿಕೊಂಡ ಸಿಂಚನ, ಸಂವಿಧಾನದ ಆಶಯದಂತೆ 18 ವರ್ಷ ಮೇಲ್ಪಟ್ಟ ಎಲ್ಲ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ನಾನು ನನ್ನ ಮೊದಲ ಮತವನ್ನು ಹಾಕಿದ್ದೇನೆ. ಇದು ನನಗೆ ತುಂಬಾನೆ ಸಂತೋಷವಾಗಿದೆ ಎಂದರು.
ಮತಗಟ್ಟೆಗೆ ಹೋದ ಸಂದರ್ಭ ಸ್ವಲ್ಪ ಗಾಬರಿಯಾದರು ನನ್ನ ಮತವನ್ನು ಮೊದಲ ಬಾರಿಗೆ ಚಲಾಯಿಸಿದ ತೃಪ್ತಿ ನನಗಿದೆ. ಹಾಗೂ ನಾನು ಮಾಡಿದ ಮೊದಲ ಮತದಾನದ ನೆನಪಿಗಾಗಿ, ಮತದಾರರಲ್ಲಿ ಜಾಗೃತಿ ಮೂಡಿಸುವುದಕ್ಕೆ ಮತ್ತು ಪರಿಸರ ಸಂರಕ್ಷಣೆಗಾಗಿ ಗಿಡ ನೆಟ್ಟಿದ್ದೇನೆ. ವಿದ್ಯಾವಂತರಾದ ನಾವುಗಳೆ ಮತದಾನ ಮಾಡಲಿಲ್ಲವೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲ ಪಡಿಸುವವರು ಯಾರು. ಆದ್ದರಿಂದ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದರು. ಈ ಸಂದರ್ಭ ತಂದೆ ನಾಗರಾಜ್ ಇದ್ದರು.