ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಮಾಣಿಕಪ್ರಭು ದೇವಸ್ಥಾನದ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಸಾವಿನ ಪ್ರಕರಣದ ಕುರಿತಂತೆ ರಾಜ್ಯಾದ್ಯಂತ ತೀರ್ವ ಪ್ರತಿಭಟನೆಗಳು ಶುರುವಾಗಿವೆ
ಏಪ್ರಿಲ್ 13 ರಂದು ನಾಪತ್ತೆಯಾಗಿದ್ದ ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದಾರ್ಥಿನಿ ಮಧು ಪತ್ತಾರ ಶವವಾಗಿ ಪತ್ತೆಯಾಗಿದ್ದರು. ಕಾಲೇಜಿನಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿ ಶವ ಪತ್ತೆಯಾಗಿದ್ದು, ನೆಲಕ್ಕೆ ತಾಗಿಕೊಂಡಂತೆ ನೇಣು ಬಿಗಿದ್ದಿದ್ದ ಮೃತದೇಹದಲ್ಲಿ ಸುಟ್ಟ ಗುರುತುಗಳೂ ಇವೆ. ಆದರೆ, ಸ್ಥಳದಲ್ಲಿ ಮಧು ಬರೆದಿದ್ದಾಳೆ ಎನ್ನಲಾದ ಡೆತ್ ನೋಟ್ ಕೂಡ ಸಿಕ್ಕಿತ್ತು.
ಈ ಮಧ್ಯೆ ಮಧುಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರು, ಪೊಲೀಸರಿಗೆ ದೂರು ನೀಡಿದ್ದು, ಇದೊಂದು ಕೊಲೆಯೆಂದು ತಿಳಿದುಬಂದಿದೆ. ಇನ್ನೊಂದೆಡೆ ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದಂತೆ ಮಧು ಅವರನ್ನ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಆಕೆಯ ಸಾವಿಗೆ ನ್ಯಾಯ ಒದಗಿಸಬೇಕು ಅಂತಾ ಇದೀಗ ಸೋಶಿಯಲ್ ಮೀಡಿಯಾದಲ್ಲಿ #justiceformadhu ಅಭಿಯಾನ ನಡೆಯುತ್ತಿದೆ.
ಹೌದು, ಈ ಅಭಿಯಾನಕ್ಕೆ ಸ್ಯಾಂಡಲ್ ವುಡ್ ಕಲಾವಿದರಾದ ನೀನಾಸಂ ಸತೀಶ್, ಹರ್ಷಿಕಾ ಪೂಣಚ್ಚಾ, ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಫೇಸ್ಬುಕ್ ನಲ್ಲಿಯೂ ಕೆಲವು ಕಲಾವಿದರು ತೀರ್ವ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.