Thursday, January 23, 2025
ಸುದ್ದಿ

ಮತ್ತೆ ಮತದಾನ ಮಾಡದೇ ತಮ್ಮ ಹಕ್ಕು ಮರೆತ ರಮ್ಯಾ – ಕಹಳೆ ನ್ಯೂಸ್

ಬೆಂಗಳೂರುಕರ್ನಾಟಕದಲ್ಲಿ ನಿನ್ನೆಯಷ್ಟೇ ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದೆ. ಮತದಾನ ಮಾಡುವ ಹಕ್ಕು ನಮ್ಮ ಹೊಣೆಯೆಂದು ಹಲವಾರು ಮಂದಿ ತಮ್ಮ ತಮ್ಮ ಊರುಗಳಲ್ಲಿ ಮತದಾನ ಮಾಡುತ್ತಿದ್ದಾರೆ. ಆದರೆ ನಟಿ ಹಾಗೂ ರಾಜಕಾರಣಿ ರಮ್ಯಾ ಮತ್ತೆ ಮತದಾನ ಮಾಡದೇ ತಮ್ಮ ಹಕ್ಕು ಮರೆತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಷಿಯಲ್ ಮೀಡಿಯಾದಲ್ಲಷ್ಟೇ ಪ್ರತ್ಯಕ್ಷ

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಈ ಬಾರೀಯೂ ಮತ ಹಾಕಿಲ್ಲ. ಸದಾ ಪಕ್ಷದ ಬಗ್ಗೆ, ಮತದಾನ ಮಾಡಿ ಎನ್ನುತ್ತಿದ್ದ ನಟಿ ರಮ್ಯಾ ತಮ್ಮ ಕರ್ತವ್ಯವನ್ನು ತಾವೇ ಮರೆತಿದ್ದಾರೆ ಅಂತಾ ಜನ ರಮ್ಯಾಗೆ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಮತದಾನದ ಬಗ್ಗೆ ಮಾತನಾಡುತ್ತಿದ್ದ ಈ ನಟಿ ಸ್ವತಃ ತಾವೇ ಮತದಾನ ಮಾಡಿಲ್ಲ.

ಮೂರನೇ ಬಾರಿ ಗೈರು

ಇನ್ನು ರಮ್ಯಾ ಮತದಾನದಿಂದ ತಪ್ಪಿಸಿಕೊಳ್ಳುತ್ತಿರುವುದು ಇದೇ ಮೊದಲೇ ಅಲ್ಲ. ಮಂಡ್ಯ ಉಪ ಚುನಾವಣೆ, ವಿಧಾನ ಸಭಾ ಚುನಾವಣೆಯಲ್ಲೂ ಈ ನಟಿ ಮತದಾನಕ್ಕೆ ಆಗಮಿಸಿಲ್ಲ. ಇನ್ನೂ ಇತ್ತೀಚೆಗೆ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದ ವೇಳೆ ಕಾಣಿಸಿದ್ದ ರಮ್ಯಾ ಮತ್ತೆ ನಾಪತ್ತೆ ಯಾಗಿದ್ದರು. ಈ ಬಾರೀಯಾದ್ರೂ ಚುನಾವಣೆಯಲ್ಲಿ ಮತದಾನ ಮಾಡುತ್ತಾರೆ ಎಂದುಕೊಂಡಿದ್ದ ಮಂದಿಗೆ ಮತ್ತೆ ನಿರಾಸೆಯಾಗಿದೆ.