KM_287 Q94
ಪುತ್ತೂರು: ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ನವದೆಹಲಿಯ ಇಂಡಿಯನ್ ನ್ಯಾಶನಲ್ ಸೈನ್ಸ್ ಅಕಾಡೆಮಿ ಮತ್ತು ಅಲಹಾಬಾದ್‍ನ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್-ಇಂಡಿಯಾ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗುವ ಎರಡು ತಿಂಗಳ ಪ್ರತಿಷ್ಠಿತ ಸಮ್ಮರ್ ಫೆಲೋಶಿಪ್‍ಗೆ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಥಮ ಎಂಎಸ್ಸಿಯ ವಿದ್ಯಾರ್ಥಿ ಸುಜಿತ್ ಎಸ್ ಆಯ್ಕೆಯಾಗಿದ್ದಾರೆ. ಇವರು ಇಂದೋರ್‍ನ ಯುಜಿಸಿ-ಡಿಎಇ ಕನ್ಸೋರ್ಟಿಯಮ್ ಫಾರ್ ಸೈಂಟಿಫಿಕ್ ರಿಸರ್ಚ್ ನ ಮುಖ್ಯಸ್ಥ ಪ್ರೊ. ವಿ. ಗಣೇಶನ್ ಇವರ ಮಾರ್ಗದರ್ಶನದಲ್ಲಿ ಕಿರು ಸಂಶೋಧನೆಯನ್ನು ಕೈಗೊಳ್ಳಲಿದ್ದಾರೆ ಎಂದು ಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.