Wednesday, January 22, 2025
ಸುದ್ದಿ

ಹಟ್ಟಿಗೆ ನುಗ್ಗಿ ದನ ಕಳ್ಳತನ : ಜಾಲ ಪತ್ತೆ ಹಚ್ಚದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ – ಕಹಳೆ ನ್ಯೂಸ್

ಮನೆಯ ಹಟ್ಟಿಯಿಂದ ಎರಡು ದನ ಕಳ್ಳತನ ನಡೆದ ಘಟನೆ ನಂದಾವರದಲ್ಲಿ ನಡೆದಿದೆ. ಸಜೀಪ ಮುನ್ನೂರು ನಂದಾವರ ಹನುಮಾನ್ ದೇವಸ್ಥಾನದ ಬಳಿಯಿರುವ ಸತೀಶ್ ಗೌಡ ಎಂಬವರ ಹಟ್ಟಿಯಿಂದ ಎರಡು ದನಗಳನ್ನು ಕಳವು ಮಾಡಲಾಗಿದೆ. ಎರಡು ದಿನಗಳ ಹಿಂದೆ ಸಜೀಪದಲ್ಲಿ ಇದೇ ರೀತಿ ಮನೆಯಿಂದ ಎರಡು ದನ ಕಳವು ನಡೆದಿತ್ತು. ಅದರಲ್ಲಿ ಒಂದು ತುಂಬು ಗರ್ಭಿಣಿ ದನ ಇತ್ತು. ಇದರ ಹಿಂದೆ ಬಹಳ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಇನ್ನು ನಿರಂತರವಾಗಿ ಕಳೆದ ಕೆಲವು ದಿನಗಳಿಂದ ಬಂಟ್ವಾಳ ತಾಲೂಕಿನಲ್ಲಿ ಹಟ್ಟಿಯಿಂದ ದನಗಳ ಕಳ್ಳತನ ರಾತ್ರಿ ಹೊತ್ತಿನಲ್ಲಿ ನಡೆಯುತ್ತಿದ್ದು ಇವರ ಜಾಲವನ್ನು ಪೋಲೀಸರು ಪತ್ತೆ ಹಚ್ಚಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದೆ. ಈ ವಿಚಾರವಾಗಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು