Wednesday, January 22, 2025
ರಾಜಕೀಯಸುದ್ದಿ

ಇಷ್ಟವಿಲ್ಲದಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿದಿರುವುದರ ಹಿಂದಿನ ಕಾರಣ ಬಿಚ್ಚಿಟ್ಟ ಹೆಚ್.ಡಿ. ದೇವೇಗೌಡ

ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮೊದಲ ಹಂತದಲ್ಲಿ ತಮ್ಮ ಕ್ಷೇತ್ರದ ಚುನಾವಣೆ ಮುಗಿದ ಕಾರಣ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ದೇವೇಗೌಡರು ವಿಜಯಪುರಕ್ಕೆ ಆಗಮಿಸಿದ್ದು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇಷ್ಟವಿಲ್ಲದಿದ್ದರೂ ತಾವು ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿದಿರುವುದರ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಬಾರಿಯೇ ತಾವು ಕೊನೆಯ ಚುನಾವಣೆ ಎಂದು ಹೇಳಿದ್ದು, ಈ ಬಾರಿ ಕಣಕ್ಕಿಳಿಯಲು ಬಯಸಿರಲಿಲ್ಲ. ಆದರೆ ಹಲವರ ಒತ್ತಡ ಹಾಗೂ ದಾರಿ ತಪ್ಪಿದ ಮೋದಿ ಆಡಳಿತ ಕೊನೆಯಾಗಬೇಕು ಎಂಬ ಕಾರಣಕ್ಕೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದೇನೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ತಮ್ಮ ಕೊನೆಯ ಚುನಾವಣೆ ಯಾಗಿದ್ದು ಮೋದಿ ತಾವೊಬ್ಬ ಸ್ಟ್ರಾಂಗ್ ಹಾಗೂ ಸ್ಥಿರ ಸರ್ಕಾರ ನೀಡಬಲ್ಲ ನಾಯಕನೆಂಬ ಭ್ರಮೆಯಲ್ಲಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ವಾಜಪೇಯಿ ಸ್ಥಿರ ಸರ್ಕಾರ ನೀಡಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.