ಉತ್ತರ ಪ್ರದೇಶದ ಗಾಜಿಯಾಬಾದ್ ಸಮೀಪದ ಗ್ರಾಮವೊಂದರಲ್ಲಿ ಯುವಕನೊಬ್ಬ ತನ್ನ 66 ವರ್ಷದ ತಾಯಿಯನ್ನು ಕೊಂದುಹಾಕಿದ ಘಟನೆ ನಡೆದಿದೆ.
ತನಗೆ ಒಂದು ಲಕ್ಷ ರೂ. ನೀಡುವಂತೆ ಮಗ ತಾಯಿಯನ್ನು ಒತ್ತಾಯಿಸಿದ್ದಾನೆ, ಹಣ ಕೊಡಲು ಆಕೆ ನಿರಾಕರಿಸಿದಾಗ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಮೇಲೆ ಇಟ್ಟಿಗೆಯಿಂದ ಮೂರು ಬಾರಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಬಳಿಕ ಅಮ್ಮ ಕಾಣಿಸುತ್ತಿಲ್ಲ ಎಂದು ತನ್ನ ಸಹೋದರರಿಗೆ ತಿಳಿಸಿದ್ದು, ಅವರೆಲ್ಲ ಹುಡುಕಲು ಆರಂಭಿಸಿದಾಗ ಮೃತ ದೇಹ ಹೊಲದಲ್ಲಿ ಕಂಡುಬಂದಿದೆ.
ಆರೋಪಿಯನ್ನು ಬಂಧಿಸಿದ್ದು, ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.