‘ಕಂದ ನಿನಗೆ ನ್ಯಾಯ ನೀ ಇಲ್ಲದಿಲ್ಲರು ಸಿಗಲಿ’ ಮಧು ಪತ್ತಾರ್ ಸಾವಿಗೆ ಯೋಗರಾಜ್ ಭಟ್ ನೋವಿನ ಪತ್ರ – ಕಹಳೆ ನ್ಯೂಸ್
‘ಕಂದ ನಿನಗೆ ನ್ಯಾಯ ನೀ ಇಲ್ಲದಿದ್ದರು ಸಿಗಲಿ’ ಮಧು ಪತ್ತಾರ್ ಸಾವಿಗೆ ಯೋಗರಾಜ್ ಭಟ್ ನೋವಿನ ಪತ್ರ
ರಾಯಚೂರಿನ ಮಾಣಿಕಪ್ರಭು ದೇವಸ್ಥಾನದ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಪ್ರಕರಣದ ಕುರಿತಂತೆ ರಾಜ್ಯದೆಲ್ಲೇಡೆ ನೋವಿನ ಕೂಗು ಮುಗಿಲು ಮುಟ್ಟಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ #ಜಸ್ಟಿಸ್ ಫರ್ ಮಧು. ಎಂಬ ಯ್ಯಾಶ್ ಟ್ಯಾಗ್ ಮೂಲಕ ಸಿನಿಮಾ ಕಲಾವಿದರು ಸಹ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇ ಬೇಕು ಎಂದು ಟ್ವೀಟ್ ಮಾಡುತ್ತಿದ್ದಾರೆ.
ಈಗಾಗಲೇ ಸ್ಯಾಂಡಲ್ ವುಡ್‍ನಲ್ಲಿ ಸತೀಶ್ ನೀನಾಸಂ, ರಕ್ಷಿತಾ, ಹರ್ಷಿಕಾ ಪೂಣಚ್ಚ, ದರ್ಶನ್, ಸಂಗೀತಾ ಭಟ್, ಸೇರಿದಂತೆ ಅನೇಕರು ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು ಎಂದು ಟ್ವೀಟ್ ಮಾಡಿದ್ದರು. ಇದೀಗ ಯೋಗರಾಜ್ ಭಟ್ ಪತ್ರವೊಂದನ್ನು ಬರೆದು ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಬೇಕು ಎಂದಿದ್ದಾರೆ.