Tuesday, January 21, 2025
ಸುದ್ದಿ

Breaking News : ಮಾನಸಿಕ ಅಸ್ವಸ್ಥ ವೃದ್ದನ ಮೇಲೆ ಪೊಲೀಸ್ ದರ್ಪ ; ಇವರು ರಕ್ಷಕರೋ ಭಕ್ಷಕರೊ ..? ಕಡಬದಲ್ಲಿ ಪೋಲೀಸ್ ಗೂಂಡಾ..? ” ಪಂಪಾಪತಿ ಕಿತಾಪತಿ ” – ಕಹಳೆ ನ್ಯೂಸ್

ಕಡಬ : ಕೈಯಲ್ಲಿ ಲಾಠಿ ಹಿಡಿದ್ರೆ ಪೊಲೀಸರಿಗೆ ಕರುಣೆಯೇ ಇರೋದಿಲ್ಲ ಅನ್ನೋ ಮಾತನ್ನು ಕೇಳಿದ್ದೇವೆ. ಆದರೆ ಇದೀಗ ಈ ಮಾತು ಅಕ್ಷರಶಃ ನಿಜವಾಗಿದೆ.


ಇಲ್ಲೊಬ್ಬ ಮಾನಸಿಕ‌ ಅಸ್ವಸ್ಥ ವೃದ್ದರೊಬ್ಬರು ಕೈಯಲ್ಲಿ ಕಲ್ಲು ಹಿಡಿದು ಯಾರಿಗೋ ಬೈಯುತ್ತಾ ಓಡಾಡುತ್ತಿದ್ದರು. ಈ ವೇಳೆಯಲ್ಲಿ ಅಲ್ಲಿಗೆ ಬಂದ ಕಡಬ ಠಾಣೆಯ ಪೊಲೀಸ್ ಸಿಬ್ಬಂಧಿ ಪಂಪಾಪತಿ ಲಾಠಿಯಿಂದ ಮಾನಸಿಕ ಅಸ್ವಸ್ಥನ ಮೇಲೆ‌ ಹಲ್ಲೆ ನಡೆಸಿದ್ದಾರೆ. ಲಾಠಿಯ ಏಟಿಗೆ ವೃದ್ದ ನೆಲಕ್ಕೆ ಬಿದ್ದಿದ್ದಾರೆ‌. ಆದರೆ ಸುಡುಬಿಸಿಲು ಅನ್ನೋದನ್ನೂ ಲೆಕ್ಕಿಸದೆ ನೆಲದಲ್ಲಿ ಬಿದ್ದ ಮೇಲೂ ಕಾಲಿನಿಂದ ಒದ್ದಿದ್ದಾರೆ. ಸಾರ್ವಜನಿಕರು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾರೀ ಜನಾಕ್ರೋಶ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವೃದ್ಧನ ಮೇಲೆ ಕ್ರೌರ್ಯ ಮೆರೆದ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಪಂಪಾಪತಿ ವಿರುದ್ದ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ವರದಿ : ಗಣೇಶ್ ಇಡಾಲ, ಕಹಳೆ ನ್ಯೂಸ್, ಕಡಬ