Monday, January 20, 2025
ಕ್ರೀಡೆಸುದ್ದಿ

ಸಚಿನ್ ಅವರ ಮಾರ್ಗದರ್ಶನ ಸಿಕ್ಕರೆ ಇನ್ನು ಚೆನ್ನಾಗಿ ಆಡುವ ಭರವಸೆ: ಪಾಕ್‌ ಯುವ ಕ್ರಿಕೆಟಿಗ – ಕಹಳೆ ನ್ಯೂಸ್

ಗಡಿ ಹಾಗೂ ರಾಜಕೀಯ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಎಷ್ಟೇ ವೈಷಮ್ಯವಿರಲಿ, ಆದರೆ ಕ್ರೀಡಾ ಮನೋಭಾವ ಬಂದಾಗ ಎಷ್ಟೋ ಆಟಗಾರರು ಪರಸ್ಪರ ಗೌರವಿಸುತ್ತಾರೆ ಹಾಗೂ ಅಭಿಮಾನಿಗಳಿದ್ದಾರೆ.

ಸಚಿನ್ ತೆಂಡೂಲ್ಕರ್ ಎಂದರೆ ವಿಶ್ವದ ತುಂಬ ಅವರನ್ನು ಇಷ್ಟಪಡದೇ ಇರುವ ಕ್ರಿಕೆಟ್ ಪ್ರೇಮಿಯೇ ಇಲ್ಲ ಎನ್ನಬಹುದು. ಇದೀಗ ಪಾಕಿಸ್ತಾನಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಅಬಿದ್ ಅಲಿ, ಸಚಿನ್ ಅವರನ್ನು ಭೇಟಿಯಾಗಿ ಸಲಹೆ ಪಡೆಯಬೇಕು ಎಂದಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕಿಸ್ತಾನದ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿರುವ ಅಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಮೊದಲನೇ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ, ಪಾಕಿಸ್ತಾನದ ಭರವಸೆಯ ಬ್ಯಾಟ್ಸ್ ಮನ್ ಆಗಿದ್ದಾರೆ. ಅವರ ಎತ್ತರ ಹಾಗೂ ಬ್ಯಾಟಿಂಗ್ ವೈಖರಿ ಸಚಿನ್ ಅವರನ್ನು ಹೋಲುತ್ತಿದ್ದು, ಸಚಿನ್ ಅವರ ಮಾರ್ಗದರ್ಶನ ಸಿಕ್ಕರೆ ಇನ್ನು ಚೆನ್ನಾಗಿ ಆಡುವ ಭರವಸೆಯಲ್ಲಿದ್ದಾರೆ. ಸಚಿನ್ ಜೊತೆಗೆ ಇತರ ಹಿರಿಯ ಆಟಗಾರರ ಮಾರ್ಗದರ್ಶನವೂ ಬೇಕೆಂದಿರುವ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು