Tuesday, January 21, 2025
ಸುದ್ದಿ

ಕಾಂಗ್ರೆಸ್ ಪಕ್ಷ ಕಳೆದ 70ವರ್ಷ ಜನರನ್ನು ಮೂರ್ಖರನ್ನಾಗಿ ಮಾಡಿತ್ತು : ಕೇಂದ್ರ ಸಚಿವ ನಿತಿನ್ ಗಡ್ಕರಿ

ಮಹಾರಾಷ್ಟ್ರ: ಕಾಂಗ್ರೆಸ್ ಪಕ್ಷ ಕಳೆದ 70ವರ್ಷ ಜನರನ್ನು ಮೂರ್ಖರನ್ನಾಗಿ ಮಾಡಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಭಾನುವಾರ ಇಲ್ಲಿ ಬಿಜೆಪಿ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದ ಚಿತ್ರಣವನ್ನು ಬದಲಾಯಿಸಿದೆ. ಜನಸಾಮಾನ್ಯರಿಗೆ ಸಹಾಯವಾಗುವಂತಹ ಮೆಟ್ರೋಗೆ ಚಾಲನೆ ನೀಡಲಾಯಿತು. ಅದರ ಜತೆಗೆ ಡಬಲ್ ಡೆಕ್ಕರ್ ಬಸ್ಸ್ ಗಳನ್ನ ಕೇಂದ್ರ ಸರ್ಕಾರ ಆರಂಭಿಸಿದ್ದು, ಇದು ನಗರದಲ್ಲಿ ಸಂಚರಿಸುತಿದ್ದು ಜನರಿಗೆ ತುಂಬಾ ಸಹಕಾರಿಯಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಬೈ ದಾಳಿ ನಡೆದಾಗ ನೂರಾರು ಮಂದಿ ಸಾವನ್ನಪ್ಪಿದ್ದರು. ನಾವೆಲ್ಲರೂ ಇದಕ್ಕೆ ಕಂಬನಿ ಮಿಡಿದೆವು. ನಿಮಗೆ ಉಗ್ರರ ಮುಂದೆ ತಲೆ ಬಾಗುವ ಪ್ರಧಾನಿ ಬೇಕೇ ಅಥವಾ ಉಗ್ರರರನ್ನು ಸದೆಬಡಿಯುವ ಪ್ರಧಾನಿ ಬೇಕೇ ಎಂದು ಪ್ರಶ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾರಾಷ್ಟ್ರದಲ್ಲಿ ನಾಲ್ಕು ಹಂತದಲ್ಲಿ ಏಪ್ರಿಲ್ 29ರ ವರೆಗೆ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. 23ರಂದು ಮತಏಣಿಕೆ ನಡೆಯಲಿದೆ.