ಇಳಂತಿಲದಲ್ಲಿ ಹಿಂದೂ ಧರ್ಮಜಾಗೃತಿ ಸಭೆ ಸಂಪನ್ನ | ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಕಲ್ಪ – ಸುಬ್ರಹ್ಮಣ್ಯ ಕುಮಾರ್ ಅಗರ್ತ
ಇಳಂತಿಲ : ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಧರ್ಮಪ್ರೇಮಿಗಳ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಉದ್ಘಾಟನೆಯನ್ನು ಬೆಳ್ತಂಗಡಿಯ ಖ್ಯಾತ ನ್ಯಾಯವಾದಿಗಳಾದ ಶ್ರೀ ಸುಬ್ರಹ್ಮಣ್ಯ ಅಗರ್ತ ಮಾಡಿದರು. ಈ ವೇಳೆ ವ್ಯಾಸಪೀಠದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ ಗೌಡ, ಸನಾತನ ಸಂಸ್ಥೆಯ ಸೌ ಲಕ್ಷ್ಮೀ ಪೈ ಉಪಸ್ಥಿತರಿದ್ದರು. ವೇದಮೂರ್ತಿಗಳಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ ಹಾಗೂ ಶ್ರೀ ಶ್ರೀರಾಮ ಇವರು ವೇದಮಂತ್ರ ಪಠಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ ದಯಾನಂದ ಹೆಗ್ಡೆ ಶಂಖನಾದ ಮೊಳಗಿಸಿದರು.
ಹಿಂದೂ ರಾಷ್ಟ್ರದ ಸ್ಥಾಪನೆಯೇ ಅಂತಿಮ ಗುರಿ
-ಶ್ರೀ ಗುರುಪ್ರಸಾದ ಗೌಡ,ಕರ್ನಾಟಕ ರಾಜ್ಯ ಸಮನ್ವಯಕರು,ಹಿಂದೂಜನಜಾಗೃತಿ ಸಮಿತಿ.
ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಕೇವಲ ವಾನರರ ಮಾಧ್ಯಮದಿಂದ ಧರ್ಮದ ರಕ್ಷಣೆಯನ್ನು ಮಾಡಿದರು, ದ್ವಾಪರಯುಗದಲ್ಲಿ ಭಗವಾನ್ ಶ್ರೀ ಕೃಷ್ಣನು ಪಾಂಡವರ ಮಾಧ್ಯಮದಿಂದ ಧರ್ಮಸಂಸ್ಥಾಪನೆಯನ್ನು ಮಾಡಿದನು, ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಗುರುಗಳಾದ ಸಮರ್ಥ ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಾವಳೆಯರ ಮಾಧ್ಯಮದಿಂದ ಹಿಂದವೀ ಸ್ವರಾಜ್ಯದ ಸ್ಥಾಪನೆಯನ್ನು ಮಾಡಿದರು, ಅದೇ ರೀತಿ ನಾವು ಗುರುಗಳ ಮಾರ್ಗದರ್ಶನದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಸಿಧ್ಧರಾಗಬೇಕಾಗಿದೆ. ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಮೋಕ್ಷದ ತನಕದ ಉಲ್ಲೇಖ ಇದೆ. ಆದರೆ ಇತರ ಮತ-ಪಂಥದಲ್ಲಿ ಕೇವಲ ಸ್ವರ್ಗದ ತನಕದ ಮಾತ್ರ ಉಲ್ಲೇಖ ಇದೆ ಆದ್ದರಿಂದ ಅತ್ಯಂತ ಶ್ರೇಷ್ಠವಾದ ಹಿಂದೂ ಧರ್ಮದ ಮಾರ್ಗದರ್ಶನಕ್ಕನುಸಾರವಾಗಿ ಸಾಧನೆ ಮಾಡಬೇಕಿದೆ.
ಇಡೀ ವಿಶ್ವದಲ್ಲಿ ದೇವರಕೋಣೆ, ಮಾತೆ, ಪುಣ್ಯಭೂಮಿ, ವಿಶ್ವಗುರು ಎಂದು ಕರೆಸಿಕೊಳ್ಳುವಂತಹ ಅರ್ಹತೆಯಿರುವ ಶ್ರೇಷ್ಠವಾದ ದೇಶ ಅದು ಕೇವಲ ನಮ್ಮ ಭಾರತ ಮಾತ್ರ, ಆದರೆ ಹಿಂದೂ ಧರ್ಮದ ಮೇಲೆ ನಿರಂತರವಾಗಿ ಧರ್ಮದ್ರೋಹಿಗಳಿಂದ ಆಘಾತಗಳಾಗುತ್ತಿದೆ, ವಿಶ್ವದಲ್ಲಿ ಕ್ರೈಸ್ತರಿಗಾಗಿ ೧೫೨ ರಾಷ್ಟ್ರಗಳಿದೆ, ಮುಸಲ್ಮಾನರಿಗೆ ೫೨ ರಾಷ್ಟ್ರಗಳಿವೆ, ಇಷ್ಟು ಮಾತ್ರವಲ್ಲ ಬೌದ್ಧರಿಗಾಗಿ ೧೨ ರಾಷ್ಟ್ರಗಳಿವೆ, ಕೇವಲ ೬೪ ಲಕ್ಷ ಸ್ವಾಭಿಮಾನಿ ಯಹೂದಿಗಳಿಗೆ ಒಂದು ಸ್ವತಂತ್ರ ಇಸ್ರೈಲ್ ರಾಷ್ಟ್ರವಿದೆ, ಆದರೆ ನೂರು ಕೋಟಿ ಹಿಂದೂಗಳಿಗೆ ಪೃಥ್ವಿಯ ಮೇಲೆ ಒಂದೇ ಒಂದು ’ಹಿಂದೂ ರಾಷ್ಟ್ರ’ವಿಲ್ಲ.
ಸೆಕ್ಯುಲರ್ ವ್ಯವಸ್ಥೆಯಿಂದಾಗಿ ಹಿಂದೂಗಳಿಗೆ ಆಡಳಿತ ವ್ಯವಸ್ಥೆಯಲ್ಲಿ ವಂಚನೆಯಾಗುತ್ತಿದೆ. ದೇಶದ ಕಾನೂನು, ರಕ್ಷಣಾ, ಶಿಕ್ಷಣಕ್ಷೇತ್ರ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನಾವು ಈ ಸಾಮಾಜಿಕ ದುಷ್ಟಪ್ರವೃತ್ತಿಗಳ ವಿರುದ್ಧ ಕಾನೂನು ಹೋರಾಟ ಮಾಡಬೇಕಿದೆ.
ದೇವಸ್ಥಾನಗಳನ್ನು ಸರಕಾರೀಕರಣ ಮಾಡಿ ದೇವಸ್ಥಾನದಲ್ಲಿ ಸಂಗ್ರಹವಾದ ಹಣವನ್ನು ಹಜ್ ಯಾತ್ರೆಗೆ ನೀಡಲಾಗುತ್ತದೆ. ಆದರೆ ಹಿಂದೂಗಳ ಅಮರನಾಥ ಯಾತ್ರೆಗೆ, ಶಬರಿಮಲೆ ಯಾತ್ರೆಗೆ ಯಾವುದೇ ಅನುದಾನ ನೀಡುತ್ತಿಲ್ಲ, ಬದಲಾಗಿ ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡದೇ ಬೇರೆ ಪರ್ಯಾಯವಿಲ್ಲ.
ಸಾತ್ತ್ವಿಕ ಶಕ್ತಿಯ ಎದುರು ದುಷ್ಟಶಕ್ತಿಯ ಕಾರ್ಯ ನಡೆಯಲು ಸಾಧ್ಯವಿಲ್ಲ.
-ನ್ಯಾ. ಸುಬ್ರಹ್ಮಣ್ಯ ಅಗರ್ತ, ಬೆಳ್ತಂಗಡಿಯ ಖ್ಯಾತ ಹಿಂದುತ್ವವಾದಿಗಳು ಬೆಳ್ತಂಗಡಿ.
’ಹಿಂದೂರಾಷ್ಟ್ರದ ಸ್ಥಾಪನೆಗಾಗಿ ನಾವು ಏನು ಮಾಡಬಹುದು ಎಂದು ಚಿಂತನೆಯನ್ನು ಮಾಡಿ, ನಾನು ಏನನ್ನಾದರೂ ಸಾಧಿಸಬಲ್ಲೆ ಎಂಬ ಛಲವನ್ನು ನಿರ್ಮಾಣ ಮಾಡಿಕೊಳ್ಳಬೇಕಿದೆ. ಸಾತ್ತ್ವಿಕ ಶಕ್ತಿಯ ಮುಂದೆ ಯಾವುದೇ ದುಷ್ಟ ಶಕ್ತಿಗಳು ನಿಲ್ಲುವುದಿಲ್ಲ, ಇನ್ನೊಬ್ಬರನ್ನು ನಾಶ ಮಾಡಲು ಹಿಂದೂ ಧರ್ಮ ಯಾವತ್ತಿಗೂ ಕಲಿಸಿಲ್ಲ, ಆದರೆ ನಮ್ಮ ಸ್ವರಂರಕ್ಷಣೆಗಾಗಿ ದುಷ್ಟಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕಿದೆ. ಸಾತ್ತ್ವಿಕ ಶಕ್ತಿಯನ್ನು ಉದ್ದೀಪನಗೊಳಿಸಲು ನಾವು ಸಂಕಲ್ಪನೆಯನ್ನು ಮಾಡಬೇಕು, ಆಗ ಹಿಂದೂರಾಷ್ಟ್ರದ ಸ್ಥಾಪನೆಯಾಗುತ್ತದೆ. ಮತ್ತೊಮ್ಮೆ ಜಗತ್ತಿನಲ್ಲಿ ಹಿಂದೂರಾಷ್ಟ್ರ ಸ್ಥಾಪನೆಯು ದೂರವಿಲ್ಲ’ .
ಹಿಂದೂ ಧರ್ಮದ ಶ್ರೇಷ್ಟತೆ ಧರ್ಮಾಚರಣೆಯಲ್ಲಿ ಅಡಗಿದೆ.
– ಸೌ ಲಕ್ಷ್ಮೀ ಪೈ, ವಕ್ತಾರರು, ಸನಾತನ ಸಂಸ್ಥೆ.
’ವಿಚಾರವಾದಿಗಳು ಎಂದುಕೊಂಡಿರುವ ವಿಚಾರಶೂನ್ಯ ಹಿಂದೂ ವಿರೋಧಿಗಳಿಂದಾಗಿ ಹಿಂದೂ ಧರ್ಮದ ಅವನತಿಯಾಗುತ್ತಿದೆ. ಜವಾಹರ್‌ಲಾಲ್ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಹೇಳಿಕೆಯನ್ನು ನೀಡಿದ ಕನ್ಹಯ್ಯನನ್ನು ತನ್ನ ಸ್ವಂತ ಮಗ ಎಂಬಂತಹ ದೇಶದ್ರೋಹಿ ಹೇಳಿಕೆ ನೀಡಿದ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಿಂದುತ್ವನಿಷ್ಟ ಸಂಘಟನೆಗಳನ್ನು ಗುರಿ ಮಾಡಲಾಗುತ್ತಿದೆ. ಆದರೆ ಯಾವುದೇ ಹಿಂದುತ್ವವಾದಿ ಸಂಘಟನೆಗಳು ಇಂತಹ ಕೃತ್ಯ ಮಾಡಲು ಸಾಧ್ಯವೇ ಇಲ್ಲ, ಹಿಂದೂ ಭಯೋತ್ಪಾದನೆಯನ್ನು ಸಿದ್ಧಪಡಿಸಲು ವಿದೇಶಿ ಶಕ್ತಿಗಳಿಂದ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ.
’ಸುಖಸ್ಯ ಮೂಲಂ ಧರ್ಮಃ’ ಅಂದರೆ ಧರ್ಮಾಚರಣೆಯಿಂದಲೇ ಸುಖ ಸಿಗಲು ಸಾಧ್ಯವಿದೆ. ನಾವೆಲ್ಲರೂ ಸ್ವತಃ ಧರ್ಮಾಚರಣೆಯನ್ನು ಮಾಡಿ ಸಮಾಜದ ವ್ಯಕ್ತಿಗಳಿಗೆ ಧರ್ಮಚಾರಣೆಯ ಮಹತ್ವವನ್ನು ತಿಳಿಸುವುದು ಅವಶ್ಯಕತೆ ಇದೆ’.
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಛಾಯಾಚಿತ್ರಮಯ
ಜೀವನ ದರ್ಶನ ಸ್ಮರಣಿಕೆ ಬಿಡುಗಡೆ.
ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಛಾಯಾಚಿತ್ರಮಯ ಜೀವನ ದರ್ಶನ ಕನ್ನಡ ಭಾಷೆಯ ಸ್ಮರಣಿಕೆಯ ಬಿಡುಗಡೆಯನ್ನು ಬೆಳ್ತಂಗಡಿಯ ಖ್ಯಾತ ಹಿಂದುತ್ವವಾದಿ ವಕೀಲರಾದ ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ ಹಾಗೂ ವ್ಯಾಸಪೀಠದಲ್ಲಿ ಉಪಸ್ಥಿತ ವಕ್ತಾರರು ಮಾಡಿದರು.
ಕಾರ್ಯಕ್ರಮದಲ್ಲಿ ಹಿಂದೂ ಧರ್ಮಪ್ರೇಮಿಗಳಾದ ಶ್ರೀ ರವಿ ಶಿಲ್ಪಾ, ವಾಣಿಶ್ರೀ ಭಜನಾ ಮಂದಿರದ ಅಧ್ಯಕ್ಷರಾದ ಬಾಲಕೃಷ್ಣ, ಶ್ರೀ ಲಕ್ಷ್ಮಣ ಮಿತ್ತಿಲ, ವಿಜಯ್ ಕುಮಾರ್ ಕಲ್ಲಳಿಕೆ, ಶ್ರೀ ಸುಂದರ ಶೆಟ್ಟಿ ಎಂಜಿರಪಳಿಕೆ, ನ್ಯಾಯವಾದಿಗಳಾದ ಶ್ಯಾಮ್ ಪ್ರಸಾದ್ ಕೈಲಾರ್, ಶ್ರೀ ಅಶೋಕ ಇಳಂತಿಲ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಶ್ರೀ ಸೀತರಾಮ ಆಳ್ವ, ಬಂದಾರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ನ್ಯಾ. ಉದಯ್ ಕುಮಾರ್ ಬಿ.ಕೆ, ಶ್ರೀ ರಾಜಶೇಖರ ರೈ ಕರಾಯ, ಶ್ರೀ ಹರಿಪ್ರಸಾದ್ ಶೆಟ್ಟಿ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಜನಾರ್ದನ ಗೌಡ ಮಾಡಿದರು. ಸಭೆಯ ಸೂತ್ರಸಂಚಾಲನೆಯನ್ನು ಕು. ಚೇತನಾ ಪ್ರಭು ಮಾಡಿದರು.
ಸಭಾಗೃಹದಲ್ಲಿ ಧಾರ್ಮಿಕ ಆಚರಣೆಗಳ ಮೌಲ್ಯವನ್ನು ಸಮಾಜಕ್ಕೆ ತಿಳಿಸಿಕೊಡುವ ಸನಾತನದ ಗ್ರಂಥಗಳ ಮಾರಾಟ ಮತ್ತು ಪ್ರದರ್ಶನ, ಧರ್ಮಶಿಕ್ಷಣವನ್ನು ತಿಳಿಸಿಕೊಡುವ ಫ್ಲೆಕ್ಸ್ ಪ್ರದರ್ಶನ ಏರ್ಪಡಿಸಲಾಗಿತ್ತು.