Recent Posts

Tuesday, January 21, 2025
ಸುದ್ದಿ

ಪರಂಗಿಪೇಟೆ ಬಳಿ ಬಂಗ್ಲಗುಡ್ಡೆಯಲ್ಲಿ ಪುರಾತನ ಕಾಲದ ಮಸೀದಿ ಅವಶೇಷಗಳು ಮತ್ತು ಮನುಷ್ಯನ ಪಳೆಯುಳಿಕೆಗಳು ಪತ್ತೆ – ಕಹಳೆ ನ್ಯೂಸ್

ಪರಂಗಿಪೇಟೆ ಸಮೀಪದ ಬಂಗ್ಲಗುಡ್ಡೆ ಎಂಬಲ್ಲಿ ಪುರಾತನ ಕಾಲದ ಸುಮಾರು 300 ವರುಷದ ಹಳೆಯ ಎನ್ನಲಾದ ಮಸೀದಿಯ ಅವಶೇಷಗಳು ಹಾಗೂ ಮುಸ್ಲಿಮರು ದಫನ ಮಾಡಿದ ಮನುಷ್ಯನ ಎಲುಬುಗಳು ಮತ್ತು ಗುಹೆಗಳು ಪತ್ತೆಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಮೂರು ದಿನಗಳ ಹಿಂದೆ ಎರಡು ಪೆರ್ನಾಲ್ ನಮಾಝ್ ಗೆ ಮಾತ್ರ ಅನುಕೂಲವಾಗುವಂತೆ ಆ ಸ್ಥಳದಲ್ಲಿ ಜೆಸಿಬಿ ಮೂಲಕ ಸಮತಟ್ಟು ಮಾಡುವ ಸಂದರ್ಭದಲ್ಲಿ ಜೆಸಿಬಿ ಆಪರೇಟರ್‍ನಿಗೆ ಕರ್ಪೂರ ಸುವಾಸನೆಯ ಪರಿಮಳ ಬರಲಾರಂಭಿಸಿದವು. ಗಡಿಬಿಡಿಗೊಂಡ ಜೆ.ಸಿ.ಬಿ ಯ ಅಪರೇಟರ್ ಸ್ಥಳೀಯ ಮುಖಂಡರಿಗೆ ಮಾಹಿತಿಯನ್ನು ನೀಡಿದ್ದಾನೆ. ವಿಷಯ ಅರಿತ ಸ್ಥಳೀಯ ಮುಖಂಡರು ಘಟನಾ ಸ್ಥಳದಲ್ಲಿ ಅಚ್ಚರಿಯೊಂದು ಕಾದಿತ್ತು. ಸರಿ ಸುಮಾರು ಮುನ್ನೂರು ವರ್ಷದ ಹಳೆಯದಾದ ಖಬರ್ ಒಂದು ಗೋಚರಗೊಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಖಬರಿನ ಮುಚ್ಚಿದ ಕಲ್ಲುಗೆ ಕಟ್ಟಲಾದ ಅಡ್ಡ ಕಲ್ಲೊಂದು ಕಳಚಿ ಬಿದ್ದಿದ್ದರಿಂದ ಖಬರಿನ ಸುತ್ತಲು ಕರ್ಪೂರದ ಸುವಾಸನೆ ಬರಲಾರಂಭಿಸಿತು. ದಫನ್ ಮಾಡಿದ ವ್ಯಕ್ತಿಯ ತಲೆಯ ಭಾಗವೂ ಕಿಬ್ಲಾಕ್ಕ ಮುಖವಾಗಿ ತಿರುಗಿದ್ದನ್ನು ಕಂಡ ಸ್ಥಳೀಯರೇಲ್ಲರೂ ಅಚ್ಚರಿಗೊಂಡಿದ್ದಾರೆ. ದಪನ್ ಮಾಡಿದ ಜನಾಝದ ಪಳೆಯುಳಿಕೆ ಈಗಲೂ ನಮ್ಮ ಕಣ್ಣ ಮುಂದಿದ್ದು, ಅದಕ್ಕೆ ಮಂಗಳೂರು ಖಾಝಿಯ ಸೂಚನೆಯಂತೆ ಪುನಃ ಕಲ್ಲನ್ನು ಅಡ್ಡಕಟ್ಟಿ ಮುಚ್ಚಿದರು.

ಖಬರಿನ ಪಕ್ಕದಲ್ಲಿ ಆಳವಾದ ಗುಹೆಯು ಕೂಡ ಪತ್ತೆಯಾಗಿದೆ. ಸ್ಥಳೀಯ ಮುಸ್ಲಿಮೇತರರನ್ನು ಸಂಪರ್ಕಿಸಿ ವಿಚಾರಿಸಿದಾಗ ಸೂರ್ಯ ಅಸ್ತದ (ಮಗ್ರಿಬ್) ಸಮಯದಲ್ಲಿ ಯಾವಾಗಲೂ ನಮಗೆ ಸುಗಂಧದ ಸುವಾಸನೆ ಬೀರುತ್ತಿತ್ತು ಎನ್ನುತ್ತಾರೆ,ಇಂದು ಘಟನಾ ಸ್ಥಳಕ್ಕೆ ಖಾಝಿಯವರು ಬೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಯಥಾಸ್ಥಿತಿಯನ್ನು ಕಾಯ್ದಿರಿಸಲು ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ.