ಟ್ವೀಟ್ ಮೂಲಕ ಸಂತಾಪ ಸೂಚಿಸಲು ಹೋದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಟ್ವೀಟ್ ಯಡವಟ್ಟು – ಕಹಳೆ ನ್ಯೂಸ್
ಪ್ರಮಾದದ ಭಾಷಣ ಮತ್ತು ಟ್ವೀಟ್ ಗಳಿಂದಲೇ ಹೆಸರುವಾಸಿಯಾದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಯಡವಟ್ಟಾದ ಟ್ವೀಟ್ ಮಾಡಿದ್ದಾರೆ.
ಶ್ರೀಲಂಕಾದದಲ್ಲಿ ನಿನ್ನೆ ಉಗ್ರರ ಬಾಂಬ್ ದಾಳಿಗೆ 138 ನಾಗರೀಕರು ಸಾವನ್ನಪ್ಪಿದ್ದರು. ಟ್ವೀಟ್ ಮೂಲಕ ಸಂತಾಪ ಸೂಚಿಸಲು ಹೋದ ಟ್ರಂಪ್ ಯಡವಟ್ಟು ಮಾಡಿಕೊಂಡಿದ್ದಾರೆ. ಘಟನೆಯಲ್ಲಿ 138 ಮಿಲಿಯನ್ ನಾಗರೀಕರು ಸಾವನ್ನಪ್ಪಿದ್ದು, 600 ಜನ ಗಾಯಗೊಂಡಿರುವುದಕ್ಕೆ ಸಂತಾಪ ವ್ಯಕ್ತಪಡಿಸಿದ ಟ್ರಂಪ್, ನಿಮ್ಮ ಸಹಾಯಕ್ಕೆ ಅಮೆರಿಕಾ ಇದೆ ಎಂದಿದ್ದಾರೆ.
138 ಮಿಲಿಯನ್ ಎಂದು ಉಲ್ಲೇಖಿಸಿರುವ ಅಂಕಿ-ಅಂಶ ಸಾಮಾಜಿಕ ಜಾಲತಾಣದಲ್ಲಿ ಗುಲ್ಕೆಬ್ಬಿಸಿದೆ. ಏಕೆಂದರೆ ಇತ್ತೀಚಿನ ವರದಿ ಪ್ರಕಾರ ಶ್ರೀಲಂಕಾದ ಜನಸಂಖ್ಯೆಯೇ 21 ಮಿಲಿಯನ್ ಇದೆ. ಆದರೆ138 ಮಿಲಿಯನ್ ಜನ ಸಾವನ್ನಪ್ಪಿರುವುದಾಗಿ ಟ್ವೀಟ್ ಮಾಡಿರುವ ಟ್ರಂಪ್ ನಂತರ ಎಚ್ಚೆತ್ತುಕೊಂಡು ಅದನ್ನ ಡಿಲೀಟ್ ಮಾಡಿದ್ದಾರೆ. ಬಳಿಕ 138 ಜನ ಈ ಘಟನೆಯಲ್ಲಿ ಸಾವನ್ನಪ್ಪಿರುವುದಕ್ಕೆ ಹಾಗೂ 600 ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿರುವುದಕ್ಕೆ ಸಂತಾಪ ವ್ಯಕ್ತಪಡಿಸಿ ಮರು ಟ್ವೀಟ್ ಮಾಡಿದ್ದಾರೆ.
ಭಾನುವಾರದವರೆಗೆ 138 ಜನ ಸಾವನ್ನಪ್ಪಿದ್ದ ಸಾವಿನ ಸಂಖ್ಯೆ ಈಗ 250 ರ ಗಡಿ ದಾಟದೆ. 450 ಕ್ಕೂ ಹೆಚ್ಚುಜನ ಗಂಭೀರ ಗಾಯಗೊಂಡಿದ್ದಾರೆ. ಪ್ರಪಂಚದ ಮೂಲೆ ಮೂಲೆಯಿಂದ ಭಯೋತ್ಪಾದಕರ ಕೃತ್ಯಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಸಾವು-ನೋವಿಗೆ ಪ್ರಧಾನಿ ಮೋದಿ ಸೇರಿದಂತೆ ಹಲವಾರು ದೇಶದ ಗಣ್ಯವ್ಯಕ್ತಿಗಳು ಕಂಬನಿ ಮಿಡಿದಿದ್ದಾರೆ.