ಧಾರ್ಮಿಕ : ಮಾರ್ಗಶಿರ ಶುಕ್ಲ ಪಕ್ಷ ಚತುರ್ದಶಿ, ಕಲಿಯುಗ ವರ್ಷ ೫೧೧೫ ರಂದು ದತ್ತ ಜಯಂತಿ ಆಚರಿಸುತ್ತಾರೆ.
ದತ್ತನ ಹೆಸರುಗಳು ಮತ್ತು ಅವುಗಳ ಅರ್ಥ
ದತ್ತ : ‘ನಮ್ಮ ಅಸ್ತಿತ್ವ ಎಂದರೆ ‘ಆತ್ಮ”, ಎಂಬುದರ ಅನುಭೂತಿಯನ್ನು ನೀಡುವವನು ! ಪ್ರತಿಯೊಬ್ಬರಲ್ಲಿಯೂ ಆತ್ಮವಿದೆ; ಆದ್ದರಿಂದ ನಾವು ಪ್ರತಿಯೊಬ್ಬರೂ ನಡೆಯುತ್ತೇವೆ, ಮಾತನಾಡುತ್ತೇವೆ ಹಾಗೂ ನಗುತ್ತೇವೆ. ಇದರಿಂದ ‘ನಮ್ಮಲ್ಲಿ ದೇವರಿದ್ದಾರೆ’, ಎಂಬುದು ಸತ್ಯವಾಗಿದೆ.ಈ ದತ್ತ ಜಯಂತಿಗೆ ನಾವು ಈ ಅರಿವನ್ನು ಜಾಗೃತಗೊಳಿಸೋಣ.
ದತ್ತನ ಜನ್ಮದ ಇತಿಹಾಸ
ಅತ್ರಿಋಷಿಯ ಪತ್ನಿ ಅನುಸೂಯಾ ಮಹಾನ್ ಪತಿವೃತೆಯಾಗಿದ್ದಳು. ಅವಳು ಧರ್ಮಾಚರಣೆಗನುಸಾರ, ಅಂದರೆ ಯಾವುದೇ ಕಠಿಣ ಪ್ರಸಂಗದಲ್ಲಿಯೂ ದೇವರಿಗೆ ಇಷ್ಟವಾಗುವ ಹಾಗೆಯೇ ವರ್ತಿಸುತ್ತಿದ್ದಳು. ಅವಳು ಎಂದಿಗೂ ಅಧರ್ಮದಿಂದ ವರ್ತಿಸುತ್ತಿರಲಿಲ್ಲ. ಈ ವಿಷಯ ಬ್ರಹ್ಮ, ವಿಷ್ಣು ಮತ್ತು ಮಹೇಶರಿಗೆ ತಿಳಿದಾಗ ಅವರು ಅನುಸೂಯಾ ಮಾತೆಯನ್ನು ಪರೀಕ್ಷಿಸಲು ನಿರ್ಧರಿಸಿದರು.
ಅನಂತರ ಅನುಸೂಯಳ ಪತಿ ಅತ್ರಿಋಷಿ ಆಶ್ರಮಕ್ಕೆ ಬಂದು ನೋಡುವಾಗ ಅಲ್ಲಿ ಮೂವರು ತೇಜಸ್ವಿ ಬಾಲಕರು ಕಾಣಿಸಿದರು. ಆಗ ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರು ಪ್ರಕಟವಾಗಿ ‘ಯಾವುದೇ ವರವನ್ನು ಕೇಳಿರಿ’ ಎಂದು ಹೇಳಿದರು. ಆಗ ಅವರಿಬ್ಬರೂ “ಈ ಬಾಲಕರು ನಮ್ಮಲ್ಲಿಯೇ ಇರಲಿ” ಎಂದು ವರ ಕೇಳಿದರು. ಅದೇ ರೀತಿ ವರವನ್ನು ನೀಡಿ ದೇವತೆಗಳು ತಮ್ಮ ಲೋಕಗಳಿಗೆ ಹಿಂದಿರುಗಿದರು. ಆದ್ದರಿಂದ ಬ್ರಹ್ಮ ದೇವರಿಂದ ಚಂದ್ರ, ವಿಷ್ಣುವಿನಿಂದ ದತ್ತ ಹಾಗೂ ಶಂಕರನಿಂದ ದುರ್ವಾಸ ಹೀಗೆ ಮೂವರು ಬಾಲಕರು ಅನುಸೂಯ ಮಾತೆಗೆ ದೊರಕಿದರು. ಅವರಲ್ಲಿ ಚಂದ್ರ ಮತ್ತು ದುರ್ವಾಸ ಇವರು ತಪಶ್ಚರ್ಯಕ್ಕಾಗಿ ಹೊರಟು ಹೋದರು ಹಾಗೂ ದತ್ತ ವಿಷ್ಣುವಿನ ಕಾರ್ಯಕ್ಕಾಗಿ ಪೃಥ್ವಿಯಲ್ಲಿ ಉಳಿದನು. ಈ ರೀತಿ ದತ್ತನ ಜನ್ಮವಾಯಿತು.
ದತ್ತ ಜಯಂತಿ ಆಚರಣೆ
ಚಿಕ್ಕಮಗಳೂರು ಜಿಲ್ಲೆಯ ದತ್ತಗಿರಿ ಪರ್ವತ ಶ್ರೇಣಿಗಳಲ್ಲಿರುವ ಚಂದ್ರದ್ರೋಣ ಪರ್ವತದ ಬಾಬಾಬುಡನ್ ಗಿರಿ ಹಿಂದೂ-ಮುಸ್ಲಿಂ ಎರಡೂ ಧರ್ಮೀಯರಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. 17ನೇ ಶತಮಾನದಲ್ಲಿ ಸೂಫಿ ಸಂತರಾದ ಬಾಬಾ ಬುಡನ್ ಎಂಬುವವರು ಇಲ್ಲಿ ವಾಸವಾಗಿದ್ದರು. ಈ ಹಿನ್ನಲೆಯಲ್ಲಿ ಈ ಹೆಸರು ಬಂತು ಎಂಬ ಪ್ರತೀತಿಯಿದೆ. ಪಶ್ಚಿಮ ಘಟ್ಟಗಳಲ್ಲಿರುವ 185ಮೀ ಎತ್ತರದ ಈ ಶಿಖರ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತದೆ. ಇಲ್ಲಿರುವ ದತ್ತಾತ್ರೇಯ ಪೀಠಕ್ಕೆ ಹಿಂದೂ-ಮುಸ್ಲೀಂರಿಬ್ಬರೂ ಪೂಜಿಸಿ ಭಾವೈಕ್ಯತೆ ಮೆರೆಯುತ್ತಾರೆ. ಈ ಪ್ರದೇಶ ದತ್ತಾತ್ರೆಯ ಸ್ವಾಮೀ ಹಾಗೂ ಹಜ್ರತ್ ದಾದಾ ಹಯಾತ್ ಮಿರ್ ಕಲಂದರ್ ವಾಸ ಸ್ಥಾನವಾಗಿದೆ ಎಂಬ ನಂಬಿಕೆಯಿದೆ. ಈ ಹಿನ್ನಲೆಯಲ್ಲಿ ದತ್ತ ಜಯಂತಿ ಆಚರಣೆ ನಡೆದು ಬಂದಿದೆ.