ಚಿಕ್ಕಮಗಳೂರು: ಇಲ್ಲಿನ ಕೋಮು ಸೂಕ್ಷ್ಮಇನಾಂ ದತ್ತಾತ್ರೇಯ ಪೀಠ ಬಾಬಾ ಬುಡಾನ್‌ಗಿರಿಯಲ್ಲಿ ಭಾನುವಾರ ದತ್ತ ಪಾದುಕೆಯ ದರ್ಶನದ ವೇಳೆ ಬಾವುಟ ನೆಡುವ ವಿಚಾರಕ್ಕೆ ವಾಗ್ವಾದ ಉಂಟಾಗಿದೆ ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ರುವ ಬಗ್ಗೆ ವರದಿಯಾಗಿದೆ.
ಸಾವಿರಾರು ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ದತ್ತ ಜಯಂತಿಯ ಹಿನ್ನಲೆಯಲ್ಲಿ ಮಾಲಾಧಾರಿಗಳಾಗಿ ಆಗಮಿಸಿದ್ದರು. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ವಿವಾಧಿತ ಸ್ಥಳಕ್ಕೆ ಸಾವಿರಾರು ಕಾರ್ಯಕರ್ತರು ನುಗ್ಗಿ ಕೇಸರಿ ಧ್ವಜ ಹಾರಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ ವಲಯ ಐಜಿಪಿ ಹೇಮಂತ್ ನಿಂಬಾಳ್‌ಕರ್ ಮತ್ತು ಎಸ್‌ಪಿ ಅಣ್ಣಾಮಲೈ ಅವರು ಸ್ಥಳದಲ್ಲಿದ್ದು ಪರಿಸ್ಥಿ ತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬೆಟ್ಟದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.
https://youtu.be/1VYheTyz78Y