Recent Posts

Sunday, January 19, 2025
ಸುದ್ದಿ

ಸಿಂಹ ಅರೆಸ್ಟ್ | ಬಿಡುಗಡೆಗೊಳಿಸದಿದ್ದರೆ ನಾಳೆ ಹುಣುಸೂರು ಬಂದ್ ; ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ – ಬಿ.ಎಸ್.ವೈ

 

ಹುಣಸೂರು : ನಿಷೇಧಾಜ್ಞೆ ಉಲ್ಲಂಘಿಸಿಯೂ ಹನುಮ ಜಯಂತಿ ಪ್ರಯುಕ್ತ ಇಲ್ಲಿ ಮೆರವಣಿಗೆ ನಡೆಸಲು ನಡೆಸಿರುವ ಪ್ರಯತ್ನವನ್ನು ಪೊಲೀಸರು ತಡೆದಿದ್ದಾರೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಹನುಮ ಮೆರವಣಿಗೆ ನಡೆಸುತ್ತಿದ್ದರು. ಹುಣಸೂರು ಪ್ರವೇಶಿಸುವ ವೇಳೆ ಪ್ರತಾಪ್ ಸಿಂಹ ಹಾಗೂ ಹಲವು ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇನ್ನೊಂದೆಡೆ ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ಹಲವರಿಂದ ಆಕ್ರೋಶ ವ್ಯಕ್ತವಾಗಿದ್ದು, ಬಿಡುಗಡೆ ಮಾಡುವಂತೆ ಆಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಮಾಹಿತಿ ತಿಳಿದು ಕೆಂಡಾಮಂಡಲವಾದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಸಂಜೆಯೊಳಗೆ ಬೇಷರತ್ತಾಗಿ ಸಿಂಹ ಬಿಡುಗಡೆಗೊಳಿಸದಿದ್ದರೆ ನಾಳೆ ಹುಣುಸೂರು ಬಂದ್ ಮಾಡಿ ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response