Recent Posts

Tuesday, November 26, 2024
ಸುದ್ದಿ

ಪುತ್ತೂರಿನಲ್ಲಿ ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಅಪಘಾತದ ನೆಪ | ಹಿಂದೂ ಯುವಕನಿಗೆ ಮಾರಣ‌ಾಂತಿಕ ಹಲ್ಲೆ ಪ್ರಕರಣ – ಹಸಂತ್ತಡ್ಕ ಖಂಡನೆ

 

ಪುತ್ತೂರು : “ಈದ್ ಮಿಲಾದ್” ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದ ಪುಂಡರ ತಂಡ ಅಪಘಾತ ನೆಪವೊಡ್ಡಿ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಾಗ ಯುವಕ ಮೊಟ್ಟೆತಡ್ಕ ನಿವಾಸಿಯಾದ “ಚಂದ್ರಶೇಖರ” ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯ ವಿವರ :
ನಿನ್ನೆ ರಾತ್ರಿ ಸುಮಾರು 12 ಗಂಟೆಗೆ ತನ್ನ ಮನೆಗೆ ಚಂದ್ರಶೇಖರ ಎನ್ನುವ ಯುವಕ ತನ್ನ ಓಮ್ನಿಯಲ್ಲಿ ಹೋಗುತ್ತಿದ್ದರು. ಸಂಪ್ಯ ಸಮೀಪ ಆಗಮಿತ್ತಿದ್ದಂತೆ ರಸ್ತೆಯಲ್ಲಿರುವ ಬ್ಯಾರಿಕೇಡನ್ನು ಕಂಡು ಗಾಡಿಯನ್ನು ನಿಧಾನ ಮಾಡಿದ್ದಾರೆ. ಆಗ ಇದ್ದಕ್ಕಿದ್ದಂತೆ ಒಬ್ಬ ಮಹಿಳೆ ಕಾರಿಗೆ ಅಡ್ಡ ಬಂದಿದ್ದಾರೆ. ನಿಧಾನವಾಗಿ ಚಲಿಸುತ್ತಿದ್ದರೂ ಒಮ್ಮೆಗೆ ನಿಲ್ಲಿಸಲು ಸಾಧ್ಯವಾಗದೇ ಮಹಿಳೆಗೆ ಕಾರು ಗುದ್ದಿದೆ. ಇತ್ತ “ಈದ್ ಮಿಲಾದ್” ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ತೆರಳುತ್ತಿದ್ದ ಕೆಲ ಕಿಡಿಗೇಡಿಗಳು ಇದನ್ನು ಗಮನಿಸಿ, ಈ ಅಪಘಾತವನ್ನೇ ನೆಪಮಾಡಿ ಕೊಂಡು ಓಮ್ನಿ ಚಾಲಕನ ಮೇಲೆ ಸುಮಾರು 30 ಕ್ಕೂ ಹೆಚ್ಚಿನ ಪುಂಡರು ಹಲ್ಲೆ ಮಾಡಿದಲ್ಲದೇ ಓಮ್ನಿ ಕಾರನ್ನು ತೀವ್ರವಾಗಿ ಜಖಂಗೊಳಿಸಿದ್ದಾರೆ. ಕಿಟಕಿ ಗಾಜುಗಳನ್ನು ಕಾಲಿನಿಂದ ಒದ್ದು ಒಡೆದು ಹಾಕಿದ್ದಾರೆ. ಇವರ ಪುಂಡಾಟಿಕೆ ಅಷ್ಟಕ್ಕೆ ನಿಲ್ಲದೇ ವೀಡಿಯೋ ಮಾಡುತ್ತಿದ್ದ ಪೋಲಿಸರ ಕೈಯಿಂದ ಮೊಬೈಲ್ ನ್ನು ಕಸಿದು ಅದರಲ್ಲಿರುವ ವೀಡಿಯೋ ಚಿತ್ರೀಕರಣವನ್ನು ಡಿಲಿಟ್ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿಯ ಚಿನ್ನಾಭರಣವನ್ನು ಲಪಟಾಯಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ. ಹಲ್ಲೆಗೊಳಗಾದ ಚಂದ್ರಶೇಖರ ರ ಸಹೋದರ ಮಿಥುನ್ ಸಂಪ್ಯ ಠಾಣೆಯಲ್ಲಿ ಪ್ರಕರಣ ಕುರಿತು ಕೇಸ್ ದಾಖಲಿಸಿದ್ದಾರೆ. ಚಂದ್ರಶೇಖರ್ ಸದ್ಯ ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫಾರುಕ್, ಅಬೀಬ್, ಅಶ್ರಫ್ ಸೇರಿದಂತೆ ಸುಮಾರು ಮೂವತ್ತು ಜನರ ಕಿಡಿಗೇಡಿಗಳ ತಂಡ ಹಲ್ಲೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುರಳಿಕೃಷ್ಣ ಹಸಂತಡ್ಕ ಖಂಡನೆ, ಉಗ್ರ ಪ್ರತಿಭಟನೆಯ ಎಚ್ಚರಿಕೆ :

ಘಟನೆಯ ಕುರಿತು ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಬಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತಡ್ಕ ಪುತ್ತೂರಿನಲ್ಲಿ ಇವತ್ತು ನಿಜಕ್ಕೂ ನೈತಿಕ ಪೊಲೀಸ್ ಗಿರಿ ನಡೆಸುವುದು ಯಾರು ಎಂಬುದು ಪೊಲೀಸ್ ಇಲಾಖೆಯ ಮುಂದೆಯೇ ಸಾಬೀತಾಗಿದೆ. ಘಟನೆಯ ಆರೋಪಿಗಳ ವಿರುದ್ಧ ತಕ್ಷಣ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಬೇಕು ಆರೋಪಿಗಳನ್ನು ದಸ್ತಗಿರಿ ಮಾಡಬೇಕು. ಇಲ್ಲದೇ ಹೋದ ಪಕ್ಷದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Response