Recent Posts

Monday, January 20, 2025
ಸಿನಿಮಾಸುದ್ದಿ

ಕೆಜಿಎಫ್ 2 ಆಡಿಷನ್‍ಗೆ ಹರಿದು ಬಂತು ಜನಸಾಗರ – ಕಹಳೆ ನ್ಯೂಸ್

ಕಳೆದ ವರ್ಷದ ಅಂತ್ಯಕ್ಕೆ ತೆರೆಕಂಡು ಭಾರತದಾದ್ಯಂತ ಸಂಚಲನ ಸೃಷ್ಠಿಸಿದ್ದ ಕನ್ನಡ ಚಿತ್ರರಂಗದ ಮಹೋನ್ನತ ಚಿತ್ರ ‘ಕೆಜಿಎಫ್ ಚಾಪ್ಟರ್ 1’, ಮುಂದುವರೆದ ಅಧ್ಯಾಯ ಚಾಪ್ಟರ್ 2ಗೆ ಅಣಿಯಾಗುತ್ತಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಬಹುತೇಕ ಪೂರ್ಣಗೊಳಿಸಿರುವ ಚಿತ್ರತಂಡ ಮೇ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೂ ಮುನ್ನ ಚಿತ್ರತಂಡ ನಿನ್ನೆ ಬೆಂಗಳೂರಿನಲ್ಲಿ 8ರಿಂದ 16 ವರ್ಷದ ಬಾಲಕರಿಗೆ ಹಾಗೂ 25 ವಯಸ್ಸಿನ ತರುಣರಿಗೆ ಆಡಿಷನ್ ಆಯೋಜಿಸಲಾಗಿತ್ತು. ಬೆಳಗ್ಗಿನಿಂದ ಸಂಜೆಯವರೆಗಿದ್ದ ಆಡಿಷನ್‍ಗೆ ನಿರೀಕ್ಷೆಗೂ ಮೀರಿ ಆಕಾಂಕ್ಷಿಗಳು ದಾರಿಯುದ್ದಕ್ಕೂ, ಯಾವ ಬಿಸಿಲನ್ನೂ ಲೆಕ್ಕಿಸದೇ ಸಾಲಾಗಿ ನಿಂತಿದ್ದರು. ಚಿತ್ರೀಕರಣಕ್ಕೂ ಮೊದಲೇ ಈ ತರಹದ ಕ್ರೇಝನ್ನು ಕಂಡು ಸ್ಯಾಂಡಲ್‍ವುಡ್ ಮಂದಿ ದಂಗಾಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಬಿಝಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಶೀಘ್ರದಲ್ಲಿಯೇ ತಂಡವನ್ನು ಸೇರಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು