Recent Posts

Monday, January 20, 2025
ಸುದ್ದಿ

ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರ ಮೇಲೆ ನಡೆದ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳ ಒತ್ತಡ ತಾಳಲಾರದೆ ಅವರು ಕ್ಯಾನ್ಸರ್‌ಗೆ ತುತ್ತಾಗುವಂತಾಯ್ತು: ರಾಮದೇವ್ – ಕಹಳೆ ನ್ಯೂಸ್

ನವದೆಹಲಿ; “ರಾಷ್ಟ್ರವಾದಿ, ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರಿಗೆ ಜೈಲಿನಲ್ಲಿ ಒಂಬತ್ತು ವರ್ಷಗಳ ಕಾಲ ಸತತ ಕಿರುಕುಳ ನೀಡಿದ್ದರಿಂದ, ಆ ಒತ್ತಡದಿಂದಲೇ ಕ್ಯಾನ್ಸರ್ ಕಾಯಿಲೆ ಆರಂಭವಾಗಿತ್ತು” ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ. “ಯಾವ ತಪ್ಪೂ ಮಾಡದ ಸಾಧ್ವಿ ಅವರನ್ನು ಒಂಬತ್ತು ವರ್ಷ ಜೈಲಿನಲ್ಲಿ ಹಿಂಸಿಸಲಾಯಿತು. ದೌರ್ಜನ್ಯ ಮಾಡಲಾಯಿತು. ಅವರ ಮೇಲೆ ನಡೆದ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳ ಒತ್ತಡ ತಾಳಲಾರದೆ ಅವರು ಕ್ಯಾನ್ಸರ್‌ಗೆ ತುತ್ತಾಗುವಂತಾಯ್ತು” ಎಂದು ರಾಮದೇವ್ ಹೇಳಿದರು.

ಬಿಹಾರದ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ಉಪಸ್ಥಿತರಿದ್ದ ರಾಮದೇವ್, ಸಾಧ್ವಿ ಅವರ ಪರವೂ ಪ್ರಚಾರ ಮಾಡಿದರು. 2008 ರ ಮಾಲೇಗಾಂವ್ ಸ್ಫೋಟದ ಆರೋಪಿಯಾಗಿ ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದ ಸಾಧ್ವಿ ಜಾಮೀನಿನ ಮೇಲೆ ಹೊರಬಂದಿದ್ದರು. ಈ ಬಾರಿಯ ಲೋಕಸಬಾ ಚುನಾವಣೆಗೆ ಬಿಜೆಪಿ, ಸಾಂಧ್ವಿ ಅವರಿಗೆ ಮಧ್ಯಪ್ರದೇಶದ ಭೋಪಾಲ್ ನಿಂದ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ಸಾಧ್ವಿ ಎದುರಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು