Monday, January 20, 2025
ಸುದ್ದಿ

ಪ್ರಧಾನಿ ಮೋದಿ ಅವರ ರ‍್ಯಾಲಿಯಲ್ಲಿ ಅಂಬಾನಿ ಪುತ್ರ ಅನಂತ್ ಅಂಬಾನಿ – ಕಹಳೆ ನ್ಯೂಸ್

ದೇಶದ ಅತಿ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕಾಂಗ್ರೆಸ್ ಅಭ್ಯರ್ಥಿ ಪರ ಬ್ಯಾಟಿಂಗ್ ಮಾಡಿದರೆ, ಇತ್ತ ಅಂಬಾನಿ ಪುತ್ರ ಮೋದಿ ಮಾತು ಕೇಳಲು ರ‍್ಯಾಲಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಶುಕ್ರವಾರ ಮುಂಬೈನಲ್ಲಿ ನಡೆದ ಪ್ರಧಾನಿ ಮೋದಿ ಅವರ ರ‍್ಯಾಲಿಯಲ್ಲಿ ಅಂಬಾನಿ ಪುತ್ರ ಅನಂತ್ ಅಂಬಾನಿ ಭಾಗವಹಿಸಿದ್ದು, ಹಲವು ಕುತೂಹಲಕ್ಕೆ ಕಾರಣವಾಗಿದೆ. ಕೆಲದಿನಗಳ ಹಿಂದಷ್ಟೇ ಮುಖೇಶ್ ಅಂಬಾನಿ ಮುಂಬೈ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾಗೆ ಬೆಂಬಲಿಸಿ, ಮಾತನಾಡಿದ್ದರು.

ಅವರ ಪುತ್ರ ಅನಂತ್, ಮೋದಿ ಭಾಷಣ ಕೇಳಲು ಆಗಮಿಸಿದ್ದೇನೆ ಎಂದಿದ್ದಾರೆ. ಮುಖೇಶ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿದರೆ, ಸಹೋದರ ಅನಿಲ್ ಅಂಬಾನಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದ್ದಾರೆ. ಇದೀಗ ಅಂಬಾನಿ ಕುಟುಂಬದ ಇತರೆ ಸದಸ್ಯರು ಯಾರಿಗೆ ಬೆಂಬಲಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು