Monday, January 20, 2025
ಸುದ್ದಿ

ದ್ರೋಣ ಸಾವಿಗೆ ಕಂಬನಿ ಮಿಡಿದ ಗಣ್ಯರು – ಕಹಳೆ ನ್ಯೂಸ್

ಮೈಸೂರು: ಮೈಸೂರು ದಸರಾ ಆನೆ ದ್ರೋಣ ಆನೆಯ ಸಾವಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ನೀರು ಕುಡಿಯುವಾಗ ಕುಸಿದು ಬಿದ್ದು, ದ್ರೋಣ ಆನೆ ನಿನ್ನೆ ಬೆಳಗ್ಗೆ ಮೃತಪಟ್ಟಿತ್ತು. ಹುಣಸೂರು ತಾಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ದ್ರೋಣ (39) ನೀರು ಕುಡಿಯುವಾಗ ಬಿದ್ದು ಮೃತಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೃದಯಾಘಾತದಿಂದಾಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮತ್ತಿಗೋಡು ಶಿಬಿರದಲ್ಲಿ ಮೈಸೂರು ದಸರಾ ಆನೆ ದ್ರೋಣ ಸಾವು ದಸರಾ ಆನೆಗಳ ಬಳಗದಲ್ಲಿ ದ್ರೋಣ ಎಂಬ ಆನೆ 18 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ದಾಖಲೆ ಮಾಡಿತ್ತು. 1998ರಲ್ಲಿ ವಿದ್ಯುತ್ ತಂತಿ ತಗುಲಿ ಅದು ಮೃತಪಟ್ಟಿತ್ತು. ಬಳಿಕ ಮತ್ತೊಂದು ಕಿರಿಯ ಆನೆಗೆ ದ್ರೋಣ ಎಂದು ನಾಮಕರಣ ಮಾಡಲಾಗಿತ್ತು. ಮೈಸೂರು ದಸರಾ ಆನೆಗಳ ಬಳಗ ಸೇರಿದ್ದ ಕಿರಿಯ ದ್ರೋಣ ಕಳೆದ ವರ್ಷ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಪತ್ತೆಯಾಗಿದ್ದ ದಸರಾ ಆನೆ ಅಶೋಕ ಡಿ.ಬಿ. ಕುಪ್ಪೆಯಲ್ಲಿ ಪತ್ತೆ ಶುಕ್ರವಾರ 39 ವರ್ಷದ ದ್ರೋಣ ಆನೆ ಮೃತಪಟ್ಟಿದೆ. ದಸರಾ ಆನೆ ದ್ರೋಣ ಸಾವಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಈ ಕುರಿತು ಟ್ವೀಟ್ ಮಾಡಿದ್ದಾರೆ.