Monday, January 20, 2025
ಸುದ್ದಿ

ನರೇಂದ್ರ ಮೋದಿ ಆಸ್ತಿ ವಿವರ – ಕಹಳೆ ನ್ಯೂಸ್

ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪುನರ್ ಆಯ್ಕೆ ಬಯಸಿ, ಹಾಲಿ ಸಂಸದ, ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಗುರುವಾರದಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ದಶಾಶ್ವಮೇಧ ಘಾಟ್ ತನಕ ರೋಡ್ ಶೋ ನಡೆಸಿದ್ದರು.

ಇನ್ನು ನಿನ್ನೆ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಮೋದಿ ನೀಡಿದ ಆಸ್ತಿಯ ವಿವರ ಹೀಗಿದೆ.
ಹೆಸರು : ನರೇಂದ್ರ ಮೋದಿ
ವಯಸ್ಸು : 68
ತಂದೆ : ದಾಮೋದರ್ ದಾಸ್ ಮೋದಿ
ವಿಳಾಸ : ಸೋಮೇಶ್ವರ್ ಟೆನಾಮೆಂಟ್, ರಣಿಪ್, ಅಹಮದಾಬಾದ್.
ಪಕ್ಷ : ಭಾರತೀಯ ಜನತಾ ಪಾರ್ಟಿ
ಕ್ಷೇತ್ರ: ವಾರಣಾಸಿ
ಮತದಾನ ಹಕ್ಕು : 55 ಸಬರಮತಿ ವಿಧಾನಸಭಾ ಕ್ಷೇತ್ರ.
* 1 ಇಮೇಲ್ ಐಡಿ, 1 ವೆಬ್ ಸೈಟ್, 1 ಫೇಸ್ಬುಕ್, 1 ಟ್ವಿಟ್ಟರ್ ಖಾತೆ ಹೊಂದಿದ್ದಾರೆ.
* 1967ರಲ್ಲಿ ಗುಜರಾತಿನಲ್ಲಿ ಎಸ್‍ಎಸ್‍ಎಲ್ ಸಿ, 1978ರಲ್ಲಿ ದೆಹಲಿ ವಿವಿಯಿಂದ ಬಿ.ಎ, 1983ರಲ್ಲಿ ಗುಜರಾತ್ ವಿವಿಯಿಂದ ಎಂ.ಎ ಪದವಿ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನರೇಂದ್ರ ಮೋದಿ: 2013-14 : 9,68,711 ರು ಆದಾಯ.
2014-15: 8,58,780 ರು
2015-16 : 19,23,160 ರು
2016-17 : 14,59,750 ರು
2017-18 : 19,92,520 ರು
* ಪತ್ನಿ ಜಶೋದಾಬೆನ್ ಐಟಿ ರಿಟನ್ರ್ಸ್ ದಾಖಲೆ ವಿವರ ತಿಳಿದಿಲ್ಲ ಎಂದು ನಮೂದಿಸಿದ್ದಾರೆ.
* ಯಾರು ಅವಲಂಬಿಯರಿಲ್ಲ. ಯಾವುದೇ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿಲ್ಲ ಎಂದು ಘೋಷಿಸಿದ್ದಾರೆ.
45 ಗ್ರಾಂ ಚಿನ್ನ: 1,13,800 ರು ಮೌಲ್ಯ
ಟಿಡಿಎಸ್ ಕಡಿತ 2018-19ರ ಆರ್ಥಿಕ ವರ್ಷ : 85,145 ರು (ಅಂದಾಜು)
ಪ್ರಧಾನಿ ಸಚಿವಾಲಯ 1,40,895 ರು
ಒಟ್ಟಾರೆ ಮೊತ್ತ : 1,41,36,119 ರು
ಸ್ಥಿರಾಸ್ತಿ: ಗುಜರಾತ್‍ನ ಗಾಂಧಿನಗರದ ವಸತಿ ಕಟ್ಟಡವೊಂದರಲ್ಲಿ ಶೇ.25 ರಷ್ಟು ಮೌಲ್ಯದ ಶೇರುಗಳನ್ನು ಹೊಂದಿದ್ದಾರೆ. 1.30,488 ರು ಮೌಲ್ಯದ ಫ್ಲಾಟ್ ಹೊಂದಿದ್ದಾರೆ. ನಿರ್ಮಾಣ ಹೂಡಿಕೆ 2,57,208 ರು ಒಟ್ಟಾರೆ 1,10,00,000 ರು ಸ್ಥಿರಾಸ್ತಿ ಮೌಲ್ಯ.
* ನವದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್ ನಲ್ಲಿ ಸರ್ಕಾರಿ ಮನೆ, ಗಾಂಧಿನಗರದಲ್ಲಿ ಸರ್ಕಾರಿ ವಸತಿ ಹೊಂದಿದ್ದಾರೆ.
* ಯಾವುದೇ ಸಾಲ, ಯಾವುದೇ ತೆರಿಗೆ ಬಾಕಿ ಹೊಂದಿಲ್ಲ.
* ಸರ್ಕಾರಿ ಹುದ್ದೆ ಹಾಗೂ ಬ್ಯಾಂಕಿನ ಬಡ್ಡಿದರವೇ ಆದಾಯದ ಮೂಲ ಎಂದಿದ್ದಾರೆ.
ಒಟ್ಟಿನಲ್ಲಿ ನಾಮ ಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಆಸ್ತಿ ವಿವರ ತಿಳಿದಿದ್ದು ನಿಷ್ಟಾವಂತ ನಾಯಕನ ಮೇಲಿನ ಗೌರವ ಹೆಚ್ಚುವಂತೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು