Recent Posts

Monday, January 20, 2025
ಸುದ್ದಿ

ಶರದ್ ಪವಾರ್ ಶಾಕಿಂಗ್ ಹೇಳಿಕೆಗೆ ಕಾಂಗ್ರೆಸ್ ಕನಸು ನುಚ್ಚುನೂರು?! – ಕಹಳೆ ನ್ಯೂಸ್

ಮುಂಬೈ: ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ನೀಡಿದ ಅಚ್ಚರಿಯ ಹೇಳಿಕೆಗೆ ಕಾಂಗ್ರೆಸ್ ನ ಮಹಾಘಟಬಂಧನದ ಕನಸು ನುಚ್ಚುನೂರಾಗುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ದೇಶದಾದ್ಯಂತ ಲೋಕಸಭೆ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿ, ಶರದ್ ಪವಾರ್ ಅವರು, “ರಾಹುಲ್ ಗಾಂಧಿ ಅವರಿಗಿಂತ ಮಮತಾ ಬ್ಯಾನರ್ಜಿ, ಮಾಯಾವತಿ ಮತ್ತು ಚಂದ್ರಬಾಬು ನಾಯ್ಡು ಉತ್ತಮ ಪ್ರಧಾನಿಯಾಗಬಲ್ಲರು” ಎಂಬ ಹೇಳಿಕೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ 78 ವರ್ಷ ವಯಸ್ಸಿನ ಪವಾರ್, “ಎನ್ ಡಿಎಯೇತರ ಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಯೋಚಿಸುವುದಕ್ಕೆ ಹೋದರೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಬಹುಜನ ಸಮಾಜ ಪಕ್ಷದ ಮಾಯಾವತಿ ಮತ್ತು ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರಿಗಿಂತ ಉತ್ತಮ ಅಭ್ಯರ್ಥಿಗಳು ಎಂಬುದು ನನ್ನ ಭಾವನೆ” ಎಂದರು. ಎನ್‍ಡಿಎಯೇತರ ಮೈತ್ರಿಕೂಟ, ಅಥವಾ ಮಹಾಘಟಬಂಧನ ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಮಹಾಘಟಬಂಧನ ಅಸ್ತಿತ್ವದಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂಬ ಮಾತು ಆಧಾರ ರಹಿತವಾದುದು. ಪ್ರಧಾನಿ ಯಾರು ಎಂಬುದನ್ನು ಫಲಿತಾಂಶದ ನಂತರ ನಿರ್ಧರಿಸಬೇಕು. ಈಗಲೇ ಹೆಸರು ಸೂಚಿಸುವುದು ಸೂಕ್ತವಲ್ಲ. ಏಕೆಂದರೆ ಆ ಹುದ್ದೆಗೆ ಸಮರ್ಥರು ಬಹಳ ಜನರಿದ್ದಾರೆ” ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು