Recent Posts

Monday, January 20, 2025
ಸಿನಿಮಾಸುದ್ದಿ

ಶ್ರುತಿ ಹಾಸನ್ ಲವ್ ಬ್ರೇಕಪ್..! – ಕಹಳೆ ನ್ಯೂಸ್

ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಪ್ರೇಮ ಕಥೆ ದುಃಖದಲ್ಲಿ ಕೊನೆಯಾಗಿದೆ. ಹಾಗಂತ ಇದು ಅವರ ನಟಿಸುತ್ತಿರುವ ಸಿನಿಮಾದ ಕಥೆ ಎಂದುಕೊಳ್ಳಬೇಡಿ! ಇದು ಅವರ ನಿಜ ಜೀವನದ ಕಥೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಂಡನ್ ಮೂಲದ ಮೈಕೆಲ್ ಕಾರ್ಸೇಲ್ ಹಾಗೂ ಶ್ರುತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಾಕಷ್ಟು ಬಾರಿ ಕ್ಯಾಮರಾ ಕಣ್ಣಿಗೂ ಅವರು ಸಿಕ್ಕಿದ್ದರು. ಆದರೆ, ಈ ಬಗ್ಗೆ ಅವರು ಮಾಧ್ಯಮದ ಎದುರು ಬಾಯ್ಬಿಟ್ಟಿರಲಿಲ್ಲ. ಶ್ರುತಿ ಇತ್ತೀಚೆಗೆ ಯಾವುದೇ ಚಿತ್ರಗಳಲ್ಲಿ ಬಣ್ಣ ಹಚ್ಚದೆ ಇರುವುದಕ್ಕೆ ಕಾರಣ ಮೈಕೆಲ್ ಎನ್ನುವ ಮಾತಿದೆ!

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಎರಡು ವರ್ಷಗಳಲ್ಲಿ ಬಹುತೇಕ ಸಮಯವನ್ನು ಶ್ರುತಿ ವಿದೇಶದಲ್ಲಿ ಕಳೆದಿದ್ದಾರೆ. ರಂಗಭೂಮಿ ಕಲಾವಿದನಾಗಿರುವ ಮೈಕೆಲ್ ಜೊತೆ ಸಿನಿಮಾ ಮಾಡಬೇಕು ಎನ್ನುವ ಉದ್ದೇಶದಿಂದ ಅವರು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನುವ ಮಾತೂ ಇದೆ.

ಆದರೆ, ಶ್ರುತಿ ಇತ್ತೀಚೆಗೆ ಸಿನಿಮಾ ಒಂದಕ್ಕೆ ಸಹಿ ಹಾಕಿದ್ದರು. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದಾದ ಬೆನ್ನಲ್ಲೇ ಮೈಕೆಲ್ ತಮ್ಮ ಬ್ರೇಕಪ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ಜೀವನ ನಮ್ಮನ್ನು ಬೇರೆ ಬೇರೆ ದಿಕ್ಕಿನಲ್ಲಿ ಇರಿಸಿದೆ ಎಂಬುದು ದುರಾದೃಷ್ಟಕರ ವಿಚಾರ. ನಾವಿನ್ನು ಬೇರೆ ಬೇರೆ ಮಾರ್ಗಗಳಲ್ಲಿ ಒಂಟಿಯಾಗಿ ಸಾಗಬೇಕಿದೆ. ಆದರೆ, ಈಕೆ ಸದಾ ನನ್ನ ಗೆಳತಿಯಾಗಿರುತ್ತಾಳೆ” ಎಂದು ಮೈಕೆಲ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಬ್ರೇಕಪ್ ವಿಚಾರ ಖಚಿತಪಡಿಸಿದ್ದಾರೆ.

ಆದರೆ, ಇದಕ್ಕೆ ಕಾರಣ ಏನು ಎನ್ನುವುದನ್ನು ಅವರು ಹೇಳಿಕೊಂಡಿಲ್ಲ.
ಶ್ರುತಿ ಹಾಸನ್ ತಮಿಳಿನಲ್ಲಿ ನಟ ವಿಜಯ್ ಸೇತುಪತಿ ಜೊತೆ ‘ಲಾಭಂ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳುನಾಡಿನ ರಾಜಪಾಳಯಂನಲ್ಲಿ ಕಳೆದ ಸೋಮವಾರದಿಂದ ಇದರ ಚಿತ್ರೀಕರಣ ಆರಂಭವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಜಗನ್ನಾಥನ್ ಅವರು ಈ ಚಿತ್ರ ನಿರ್ದೇಶಿಸುತ್ತಿದ್ದು, ಇದೇ ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ಶ್ರುತಿ ಹಾಗೂ ವಿಜಯ್ ತೆರೆ ಹಂಚಿಕೊಳ್ಳುತ್ತಿದ್ದಾರೆ.