ಕೊಲಂಬೋ: ಈಸ್ಟರ್ ಭಾನುವಾರದಂದು ಶ್ರೀಲಂಕಾದ ಚರ್ಚ್ ಹಾಗೂ ಪಂಚತಾರಾ ಹೋಟೆಲ್‍ಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೆ ಶ್ರೀಲಂಕಾದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರಿದಿದೆ. ಸೈಂಥಮರುಥು ಎಂಬಲ್ಲಿ ಮನೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ಉಗ್ರರನ್ನು ರಕ್ಷಣಾ ಪಡೆಯ ಸಿಬ್ಬಂದಿ ಸುತ್ತುವರೆದಿದ್ದಾರೆ. ರಕ್ಷಣಾ ಪಡೆ ದಾಳಿ ಮಾಡುತ್ತಿದ್ದಂತೆ ಉಗ್ರರಿಂದ ತೀವ್ರ ಗುಂಡಿನ ದಾಳಿ ನಡೆದಿದ್ದು, ಶ್ರೀಲಂಕಾದ ರಕ್ಷಣಾ ಪಡೆ ಪ್ರತಿಯಾಗಿ ಕಾರ್ಯಾಚರಣೆ ನಡೆಸಿದೆ.
ಗುಂಡಿನ ಚಕಮಕಿಯಲ್ಲಿ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ 15 ಮಂದಿ ಮೃತಪಟ್ಟಿದ್ದಾರೆ. 6 ಮಕ್ಕಳು, 6 ಪುರುಷರು 3 ಮಹಿಳೆಯರು ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇಬ್ಬರು ಆತ್ಮಾಹುತಿ ಬಾಂಬರ್ಗಳು ಎಸ್ಕೇಪ್ ಆಗಿದ್ದು, ತಲೆಮರೆಸಿಕೊಂಡ ಇಬ್ಬರಿಗೆ ಶೋಧ ಮುಂದುವರಿದಿದೆ. ಉಗ್ರರು ನ್ಯಾಷನಲ್ ತೌಹೀದ್ ಜಮಾತ್ ಎಂಬ ಸಂಘಟನೆಗೆ ಸೇರಿದವರೆಂದು ತಿಳಿದುಬಂದಿದೆ. ಈಜಿಪ್ಟ್, ಸಿರಿಯಾ, ಪಾಕ್ ಮೂಲದವರೂ ಸೇರಿ ಈವರೆಗೆ 76 ಶಂಕಿತರನ್ನು ಬಂಧಿಸಲಾಗಿದೆ.
ಇನ್ನು ರಾಜ್ಯದಲ್ಲೂ ಹೈ ಅಲರ್ಟ ಘೋಷಿಸಲಾಗಿದ್ದು ಯಾವುದೇ ಕ್ಷಣದಲ್ಲಾದರು ಉಗ್ರರು ಸ್ಫೋಟಕ ಕೃತ್ಯ ನಡೆಸಬಹುದು ಎಂದು ರಾಜ್ಯ ಪೋಲಿಸ್ ಇಲಾಖೆ ಮಹಾನಗರಗಳಲ್ಲಿ ಕಟ್ಟೆಚ್ಚರ ವಹಿಸಿದೆ.