ಪ್ರತಿ ನಿತ್ಯ ನಾವು ವ್ಯವಹಾರಕ್ಕೆ ಬಳಸುವ ಹಣಗಳಲ್ಲಿ ದಿನ ಕಲೆದಂತೆ ಒಂದೊಂದೆ ನೋಟ್ ಬದಲಾಗಿ ಹೊಸ ನೋಟ್ ಚಲಾವಣೆಗೆ ಬರುತ್ತಿದೆ, ಅಂತೇಯೇ ಇದೀಗ ಈ ನೋಟ್‍ಗಳ ಲೋಕಕ್ಕೆ ಹೊಸ 20 ರೂಪಾಯಿ ನೋಡಲು ಸಿಗಲಿದೆ. ಆರ್.ಬಿ.ಐ. ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಆರ್.ಬಿ.ಐ. ಹೊಸ 20 ರೂಪಾಯಿ ಬಣ್ಣ ಸೇರಿದಂತೆ ಎಲ್ಲದರ ಬಗ್ಗೆ ಮಾಹಿತಿ ನೀಡಿದೆ.
ಹೊಸ 20ರ ನೋಟ್‍ನಲ್ಲಿ ಏನೇನಿರಲಿದೆ..?
* ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಸಹಿಯಿರಲಿದೆ.
* ನೋಟಿನ ಹಿಂದಿನ ಭಾಗದಲ್ಲಿ ದೇಶದ ಸಂಸ್ಕೃತಿ ಬಿಂಬಿಸುವ ಎಲ್ಲೋರು ಗುಹೆಗಳ ಚಿತ್ರವಿರಲಿದೆ.
* 20 ರೂಪಾಯಿ ಹೊಸ ನೋಟಿನ ಮುಂಭಾಗದ ಮಧ್ಯದಲ್ಲಿ ಮಹಾತ್ಮಾಗಾಂಧಿ ಫೋಟೋ ಇರಲಿದೆ.
* ಹಿಂದಿ ಹಾಗೂ ಇಂಗ್ಲೀಷ್ ಅಂಕೆಯಲ್ಲಿ ನೋಟಿನ ಮೌಲ್ಯವಿರಲಿದೆ.
* ನೋಟಿನ ಬಣ್ಣ ಹಸಿರು ಮಿಶ್ರಿತ ಹಳದಿಯಾಗಿರಲಿದೆ.
* ನೋಟು 63 ಎಂಎಂ ಅಗಲ ಹಾಗೂ 129 ಮಿಮಿ ಉದ್ದವಿರಲಿದೆ.
ಮಹಾತ್ಮಾ ಗಾಂಧಿ ಸರಣಿಯ ಹೊಸ ನೋಟಿನ ಜೊತೆ ಹಳೆ 20 ರೂಪಾಯಿ ನೋಟು ಕೂಡ ಚಾಲ್ತಿಯಲ್ಲಿರಲಿದೆ ಎಂದು ಆರ್.ಬಿ.ಐ. ಹೇಳಿದೆ.