Monday, January 20, 2025
ಸುದ್ದಿ

ಜಿನ್ನಾರನ್ನು ಒಳಗೊಂಡು ಕಾಂಗ್ರೆಸ್ ಪರಿವಾರ ದೇಶಕ್ಕಾಗಿ ಶ್ರಮಿಸಿದೆ: ಶತ್ರುಘ್ನ ಸಿನ್ಹಾ – ಕಹಳೆ ನ್ಯೂಸ್

ಚಿಂದವಾಡ, ಮಧ್ಯಪ್ರದೇಶ: ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾದ ನಟ, ರಾಜಕರಣಿ ಶತ್ರುಘ್ನ ಸಿನ್ಹಾ ಮತ್ತೊಂದು ವಿವಾದವನ್ನು ಭುಗಿಲೆಬ್ಬಿಸಿದ್ದಾರೆ. ತಾವು ಕಾಂಗ್ರೆಸ್ ಸೇರಿದ್ದರೂ ಇತ್ತೀಚೆಗಷ್ಟೇ ಕಾನ್‍ಪುರದಲ್ಲಿ ಪತ್ನಿಗಾಗಿ ಸಮಾಜವಾದಿ ಹಾಗೂ ಬಿಎಸ್‍ಪಿ ಪರ ಪ್ರಚಾರ ನಡೆಸಿದ್ದ ಶತ್ರುಘ್ನ ಸಿನ್ಹಾ ಈಗ ಭಾರತದ ಇಬ್ಭಾಗಕ್ಕೆ ಕಾರಣನಾದ ಪಾಕಿಸ್ತಾನದ ಪಿತಾಮಹ ಮಹಮ್ಮದ್ ಅಲಿ ಜಿನ್ನಾ ಪರ ಬ್ಯಾಟ್ ಬೀಸಿದ್ದಾರೆ.

ಇಂದು ಮಧ್ಯಪ್ರದೇಶದ ಚಿಂದವಾಡದಲ್ಲಿ ಮಾತನಾಡುತ್ತಿದ್ದ ಸಿನ್ಹಾ, ಈ ಕಾಂಗ್ರೆಸ್ ಪರಿವಾರದಲ್ಲಿ ಮಹಾತ್ಮಾ ಗಾಂಧಿಯವರಿಂದ ಹಿಡಿದು ಸರ್ದಾರ್ ವಲ್ಲಭ್ ಭಾಯ್ ಪಟೇಲ್ ವರೆಗೆ, ಮಹಮ್ಮದ್ ಅಲಿ ಜಿನ್ಹಾರಿಂದ ಹಿಡಿದು ಜವಾಹರ್‍ಲಾಲ್ ನೆಹರು ತನಕ, ದಿವಂಗತ ಇಂದಿರಾ ಗಾಂಧಿ, ರಾಜೀವ್‍ಗಾಂಧಿ, ರಾಹುಲ್‍ಗಾಂಧಿಯವರಿಂದ ಹಿಡಿದು ಸುಭಾಷ್ ಚಂದ್ರ ಬೋಸ್ ಅವರ ಈ ಕಾಂಗ್ರೆಸ್ ಪಾರ್ಟಿ, ದೇಶದ ಬೆಳವಣಿಗೆಗಾಗಿ, ದೇಶದ ಅಭಿವೃದ್ಧಿಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಅತ್ಯಂತ ದೊಡ್ಡ ಕೊಡುಗೆ ನೀಡಿದೆ, ಅದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ ಅಂತಾ ಹೇಳಿದ್ರು. ಇದೇ ವೇಳೆ ಪ್ರಧಾನಿ ಮೋದಿ ಜೊತೆ ನಟ ಅಕ್ಷಯ್ ಕುಮಾರ್ ಸಂದರ್ಶನ ಮಾಡಿದ ಬಗ್ಗೆ ಟೀಕಿಸಿದ ಅವರು, ಹಲವು ರಿಹರ್ಸಲ್‍ಗಳ ಬಳಿಕ, ಸ್ಕ್ರಿಪ್ಟ್ ರೈಟರ್‌ಗಳ ಸಹಾಯದಿಂದ ಈ ಸಂದರ್ಶನ ನಡೆದಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು, ದೇಶಕ್ಕಿಂತ ಯಾವುದೂ ದೊಡ್ಡದಲ್ಲ ಅಂತ ಪ್ರಧಾನಿ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು. ಜೊತೆಗೆ ಮೋದಿ ಸರ್ಕಾರದ ಜಿಎಸ್‍ಟಿ ಹಾಗೂ ನೋಟ್‍ಬ್ಯಾನ್ ನಿರ್ಧಾರವನ್ನ ಖಂಡಿಸಿದ್ರು. ಶತ್ರುಘ್ನ ಸಿನ್ಹಾ, ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಾಗೇ ಅವರ ಪತ್ನಿ ಪೂನಂ ಸಿನ್ಹಾ, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೃಹ ಸಚಿವ ರಾಜನಾಥ್ ಸಿಂಗ್ ವಿರುದ್ಧ ಲಖನೌ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು